ಸಂಸ್ಕೃತಿ ಬೆಳೆಸಿ ಸನಾತನಧರ್ಮ ಉಳಿಸಿ

ಕೊಟ್ಟೂರು ಚಾನುಕೋಟಿ ಮಠದಲ್ಲಿ ಡಾ.ಸಿದ್ಧಲಿಂಗ ಶಿವಾಚಾರ್ಯರರ ಷಷ್ಠಿ ಸಂಭ್ರಮ ಹಾಗೂ ಪಂಚಾಚಾರ್ಯರ ಯುಗಮಾನೋತ್ಸವದ ಆರನೇ ದಿನದ ಕಾರ್ಯಕ್ರಮಕ್ಕೆ ಎಂ.ಎಂ.ಜೆ.ಹರ್ಷವರ್ಧನ ಚಾಲನೆ ನೀಡಿದರು. ಉಜ್ಜಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯರು, ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಸ್ವಾಮೀಜಿ, ಬೆಣ್ಣೆಹಳ್ಳಿ ಷಡಕ್ಷರಿ ಸ್ವಾಮೀಜಿ ಇತರರಿದ್ದರು.

Published on

ಕೊಟ್ಟೂರು: ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬೆಳೆಸಿದರೆ ಸನಾತನಧರ್ಮ ಉಳಿಯುತ್ತದೆ ಎಂದು ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ.ಹರ್ಷವರ್ಧನ ಹೇಳಿದರು.

ಪಟ್ಟಣದ ಚಾನುಕೋಟಿ ಮಠದಲ್ಲಿ ಡಾ.ಸಿದ್ಧಲಿಂಗ ಶಿವಾಚಾರ್ಯರ ಷಷ್ಠಿ ಸಂಭ್ರಮ ಹಾಗೂ ಪಂಚಾಚಾರ್ಯರ ಯುಗಮಾನೋತ್ಸವದ ಆರನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವಕರು ಪಾಶ್ಚಿಮಾತ್ಯ ಸಂಸ್ಕೃತಿಯ ಸ್ವೇಚಾಚಾರಕ್ಕೆ ಹಾಗೂ ಸಂಬಂಧರಹಿತ ಬಾಂಧವ್ಯಕ್ಕೆ ಮನಸೋತು ಸನಾತನ ಧರ್ಮ ಮರೆಯುತ್ತಿರುವುದು ನೋವಿನ ಸಂಗತಿ. ಜನರಲ್ಲಿ ಸಂಸ್ಕೃತಿಯನ್ನು ಬೆಳೆಸುವ ದೃಷ್ಟಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಪ್ರಮುಖರಾದ ಕರಡಿ ಕೊಟ್ರಯ್ಯ, ರಾಂಪುರ ವಿವೇಕಾನಂದ, ದಾರುಕೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net