

ಗುಳೇದಗುಡ್ಡ: ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಕಲೆ ಹಾಗೂ ಪರಂಪರೆ ಬಿತ್ತುವ ಮೂಲಕ ಅವರ ಭವಿಷ್ಯ ಉಜ್ವಲಗೊಳಿಸಬೇಕೆಂದು ಚಿದಾನಂದಸ್ವಾಮಿ ದೇವಾಂಗಮಠ ಹೇಳಿದರು.
ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಸಂಸ್ಕಾರ ಭಾರತಿ ಹಾಗೂ ಗುಳೇದಗುಡ್ಡದ ಅಖಿಲ ಭಾರತೀಯ ಕಲೆ ಮತ್ತು ಸಾಹಿತ್ಯ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ಗುರುವಂದನೆ, ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಸನಾತನ ಧರ್ಮ ಪರಂಪರೆ ಹಾಗೂ ಸಾಮಾಜಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿರುವ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು.
ಶಂಕರ ಮುಂದಿನಮನಿ ನೇತೃತ್ವದ ಜ್ಞಾನ ಸಿಂಧು ಸಾಂಸ್ಕೃತಿಕ ಸಂಸ್ಥೆ ಹಾಗೂ ಕಲಾ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಶಂಕರ ರೂಡಗಿ, ವಿವೇಕಾನಂದ ದೇವಾಂಗಮಠ, ಬಸವರಾಜ ಕುಂಬಾರ, ಮಲ್ಲಿಕಾರ್ಜುನ ರಾಜನಾಳ, ಮಹಾದೇವ ಜಗತಾಪ, ತಿಪ್ಪಣ್ಣ ಮಂಗಳೂರು, ಬಸವರಾಜ ಜಿಡಗಿ, ಸಂಗಮೇಶ ಉಣಚಗಿ ಮತ್ತಿತರಿದ್ದರು.