ಸಾಧಿಸುವ ಛಲ ರೂಢಿಸಿಕೊಳ್ಳಿ

Cultivate a will to achieve.
ಲೋಕಾಪುರ ಪಟ್ಟಣದ ಬಸವೇಶ್ವರ ಬಾಲಕಿಯರ ಶಾಲೆ ಆವರಣದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಡಾ. ಚಂದ್ರಶೇಖರ ಸ್ವಾಮೀಜಿ, ಎಸ್.ಎಂ. ಹುದ್ದಾರ, ಸಿ.ಎಂ. ಪೂಜೇರ, ಎಚ್.ಪಿ. ಶೇಬನ್ನವರ, ಅರ್ಚನಾ ಬಡಿಗೇರ, ಮುಸ್ಕಾನ ಸುಭೆದಾರ ಮತ್ತಿತರರಿದ್ದರು.
Published on

ಲೋಕಾಪುರ: ವಿದ್ಯಾರ್ಥಿನಿಯರು ಸಕಾರಾತ್ಮಕ ಚಿಂತನೆ ಹಾಗೂ ನಿಶ್ಚಿತ ಗುರಿಯೊಂದಿಗೆ ಸಾಧಿಸುವ ಛಲ ರೂಢಿಸಿಕೊಳ್ಳಬೇಕು ಎಂದು ಹಿರೇಮಠದ ಡಾ. ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಪಟ್ಟಣದ ಬಿವಿಬಿ ಸಂಘದ ಬಸವೇಶ್ವರ ಬಾಲಕೀಯರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬಿವಿವಿಎಸ್ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಸಾಧಿಸುವ ಉದ್ದೇಶಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಗುರುಗಳ ಪಾತ್ರ ಅಮೂಲ್ಯವಾದದು. ನಿಮ್ಮ ಸಾಧನೆ ನೋಡಿ ಸಂತೋಷಪಡುವ ಮೊದಲ ವ್ಯಕ್ತಿ ಅವರೇ ಆಗಿರುತ್ತಾರೆ ಎಂದರು.

ಪ್ರಾಚಾರ್ಯ ಎಸ್.ಎಂ. ಹುದ್ದಾರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಎಂ.ಎಲ್. ನಾಯಕ ವರದಿ ವಾಚಿಸಿದರು.

ಸಾಂಸ್ಕೃತಿಕ , ಕ್ರೀಡಾ ಸ್ಫರ್ದೆಗಳಲ್ಲಿ ವಿಜೇತರಿಗೆ, ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿನಿಯರಿಗೆ ಹಾಗೂ ಪಟ್ಟಣದ ಪತ್ರಕರ್ತರಿಗೆ ಸನ್ಮಾನಿಸಲಾಯಿತು.

ಶಿಕ್ಷಕ ಸಿ.ಎಂ. ಪೂಜಾರ, ಎಚ್.ಪಿ. ಶೇಬನ್ನವರ, ಅರ್ಚನಾ ಬಡಿಗೇರ, ಮುಸ್ಕಾನ ಸುಬೇದಾರ, ಬಿಪ್ಸ್ ಪ್ರಾಚಾರ್ಯ ಪರಶುರಾಮ ವನಸಿ, ಮುಖ್ಯಶಿಕ್ಷಕ ಎಸ್.ಬಿ. ಪಾಟೀಲ ಮತ್ತಿತರರಿದ್ದರು. ಶಿಕ್ಷಕ ಡಿ.ಎಚ್. ಜಮಾದಾರ ಸ್ವಾಗತಿಸಿದರು. ಎಂ.ಟಿ ಚೌಧರಿ ಮತ್ತು ವೈ.ಐ. ಜಂಬಗಿ ನಿರೂಪಿಸಿದರು. ಆರ್.ವಿ. ಮುತಾಲಿಕ್ ದೇಸಾಯಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net