

ಕುಂದಾಪುರ: ಮಕ್ಕಳಲ್ಲಿ ಯಕ್ಷಗಾನ ಅಭಿರುಚಿ ಹುಟ್ಟಬೇಕೆಂಬ ಉದ್ದೇಶದಿಂದ ಹೂವಿನಕೋಲು ಕಲಾಪ್ರಕಾರ ಹುಟ್ಟಿಕೊಂಡಿದ್ದು, ಇದರ ಪುನರುಜ್ಜೀವನಗೊಳಿಸಲು ಶ್ರಮಿಸುತ್ತಿರುವ ಯಶಸ್ವಿ ಕಲಾವೃಂದದ ಕಾರ್ಯ ಅಭಿನಂದನೀಯ ಎಂದು ಡಾ.ಆದರ್ಶ ಹೆಬ್ಬಾರ್ ಹೇಳಿದರು.
ಕುಂದಾಪುರದ ಕಲಾ ಪೋಷಕ ಡಾ.ಆದರ್ಶ ಹೆಬ್ಬಾರ್ ಮನೆಯಲ್ಲಿ ಮಂಗಳವಾರ ಕೊಮೆ-ತೆಕ್ಕಟ್ಟೆಯ ಯಶಸ್ವಿ ಕಲಾವೃಂದದ 13ನೇ ವರ್ಷದ ಹೂವಿನಕೋಲು ತಿರುಗಾಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಯಶಸ್ವಿ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ, ಉಪನ್ಯಾಸಕ ಶಂಕರನಾರಾಯಣ ಉಪಾಧ್ಯಾಯ, ಪಂಚಮಿ ಹಾಗೂ ಅಭಿಯಾನದ ಕಲಾವಿದರು ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ನಿರೂಪಿಸಿದರು. ಬಳಿಕ ಸುಧನ್ವಾರ್ಜುನ ಹಾಗೂ ಹನುಮ-ಲಂಕಿಣಿ ಕತೆ ಭಾಗದ ಹೂವಿನಕೋಲು ಪ್ರದರ್ಶನಗೊಂಡಿತು. ಗಣಪತಿ ಭಟ್ ನಿಟ್ಟೂರು, ಕೃಷ್ಣ ಗಿಳಿಯಾರು, ವಿಶ್ವನಾಥ ಮಾಸ್ಟರ್, ಗಣೇಶ್ ಕೊಮೆ, ಜನಾರ್ದನ ಹಂದೆ, ಅಶೋಕ್ ಬಸ್ರೂರು, ಪ್ರಶಾಂತ್ ಆಚಾರ್ ಕೆಳಕಳಿ, ರಾಜೇಶ್ ಕೋಡಿ, ಪ್ರಶಾಂತ್ ಪಡುಕೆರೆ, ಹೆರಿಯ ಮಾಸ್ಟರ್, ವೆಂಕಟೇಶ ವೈದ್ಯ ಹೂವಿನಕೋಲು ತಿರುಗಾಟದ ನೇತೃತ್ವ ವಹಿಸಿದ್ದರು. ಹರ್ಷಿತಾ, ಆರಬಿ ಹೆಗಡೆ, ಪರಿಣಿತ ವೈದ್ಯ, ಪವನ್, ಕಿಶನ್, ಪೂರ್ವಿ, ಪ್ರಣಮ್ಯ, ರಚಿತ್, ಸಂಕೇತ್, ಆರಬಿ ಸಾಮಗ, ತ್ರಿಷಾ, ರಾಹುಲ್ ಅಮೀನ್, ರಾಹುಲ್ ಕುಂದರ್, ದೇವದಾಸ್ ರಾವ್ ಕೂಡ್ಲಿ ಅಭಿಯಾನದಲ್ಲಿ ಭಾಗವಹಿಸಿದ್ದರು.