ಅಂಗವಿಕಲ ಮಕ್ಕಳ ಪಾಲನೆ ಅಗತ್ಯ

VISIT
ಕುಕನೂರಿನಲ್ಲಿ ಅಂಗವಿಕಲ ಮಕ್ಕಳಿಗೆ ಹಮ್ಮಿಕೊಂಡಿದ್ದ ನಿತ್ಯ ವ್ಯಾಯಾಮ ಹಾಗೂ ನಾನಾ ಕ್ರೀಯಾ ಚಟುವಟಿಕೆಗಳನ್ನು ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ವೆಂಕಟೇಶ ದೇಶಪಾಂಡೆ ಶನಿವಾರ ವೀಕ್ಷಣೆ ಮಾಡಿದರು. ಸಿಡಿಪಿಒ ಬೆಟ್ಟದಪ್ಪ, ಪಪಂ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟೆ, ಪಪಂ ಸದಸ್ಯ ನೂರುದ್ದೀನ ಗುಡಿಹಿಂದಲ್ ಇದ್ದರು.
Published on

ಕುಕನೂರು: ಅಂಗವಿಕಲ ಮಕ್ಕಳ ಪಾಲನೆ-ಪೋಷಣೆ ಅಗತ್ಯ. ಅಂತಹ ಮಕ್ಕಳನ್ನು ದೇವರೆಂದು ಪರಿಗಣಿಸಿ ಎಂದು ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ವೆಂಕಟೇಶ ದೇಶಪಾಂಡೆ ಹೇಳಿದರು.

ಪಟ್ಟಣದಲ್ಲಿ ವೀರಭದ್ರೇಶ್ವರ ವಿಕಲಚೇತನ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ, ಸಮೂಹ ಸಮರ್ಥ ಸಂಸ್ಥೆ ಆಯೋಜಿಸಿದ್ದ ಅಂಗವಿಕಲ ಮಕ್ಕಳಿಗೆ ನಿತ್ಯ ವ್ಯಾಯಾಮ ಹಾಗೂ ವಿವಿಧ ಕ್ರೀಯಾ ಚಟುವಟಿಕೆಗಳನ್ನು ವೀಕ್ಷಣೆ ಮಾಡಿ ಶನಿವಾರ ಮಾತನಾಡಿದರು.

ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳಿಗೆ ನಿತ್ಯ ವ್ಯಾಯಾಮ ಮಾಡಿಸುವ ಅಗತ್ಯವಿದೆ. ಇದರಿಂದ ಅವರ ದೇಹದಲ್ಲಿ ಬದಲಾವಣೆ ಸಾಧ್ಯ. ಅವರೊಂದಿಗೆ ಸದಾ ಪಾಲಕರು ಹಾಗೂ ಕುಟುಂಬ ಸದಸ್ಯರು ಬೆರೆಯಬೇಕು. ಅವರನ್ನು ದೇವರ ಸ್ವರೂಪದಲ್ಲಿ ಕಾಣಬೇಕು. ನಿತ್ಯ ಅವರಿಗೆ ವ್ಯಾಯಾಮ ಮಾಡಿಸುವುದರಿಂದ ಅವರ ದೇಹದಲ್ಲಿ ಹಸಿವು ಹೆಚ್ಚಿಸುತ್ತದೆ. ಅಲ್ಲದೆ ಮಿದುಳು ಸಕ್ರಿಯವಾಗುತ್ತದೆ. ಅಂಗಾಂಗಗಳ ಚಲನವಲನ ಆಗುತ್ತದೆ ಎಂದರು.

ಈ ವೇಳೆ ಬಳಗೇರಿ ಗ್ರಾಮದಲ್ಲಿ ಒಂದೇ ಕುಟುಂಬದಲ್ಲಿ ಮೂರು ಮಕ್ಕಳು ಅಂಗವಿಕಲರಾಗಿದ್ದು, ಆ ಮಕ್ಕಳಿಗೆ ಅಂಗವಿಕಲ ಜಿಲ್ಲಾಧಿಕಾರಿ ವೆಂಕಟೇಶ ಅವರು ಸರ್ಕಾರಿ ಸೌಲಭ್ಯಗಳನ್ನು ತಲುಪುವಂತೆ ಕ್ರಮ ತೆಗೆದುಕೊಳ್ಳಲು ಸೂಚಿಸಿದರು. ಸಿಡಿಪಿಒ ಬೆಟ್ಟದಪ್ಪ, ಪಪಂ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟೆ, ಪಪಂ ಸದಸ್ಯ ನೂರುದ್ದೀನ ಗುಡಿಹಿಂದಲ್, ಶಿಕ್ಷಣ ಸಂಸ್ಥೆ ಅಧ್ಯಕ್ಷ ಈರಪ್ಪ ಕರೆಕುರಿ, ಸಮೂಹ ಸಾಮರ್ಥ್ಯ ಸಂಸ್ಥೆಯ ಪ್ರವೀಣ, ವಿಆರ್‌ಡಬ್ಲುೃ ಶರಣಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net