ಎಲ್ಲ ಅರ್ಹ ಕುಟುಂಬಗಳಿಗೂ ಹಕ್ಕು ಪತ್ರ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

IMG_20220921_1014345555
Published on

ಚಿತ್ರದುರ್ಗ: ನಗರದ ವಿವಿಧ ಪ್ರದೇಶಗಳಲ್ಲಿ ವಾಸವಿರುವ 10-12 ಸಾವಿರ ಅರ್ಹ ಕುಟುಂಬಗಳಿಗೂ ಹಂತ,ಹಂತವಾಗಿ ಹಕ್ಕು ಪತ್ರ ವಿತರಿಸಲಾಗುವುದು, ಯಾವೊಂದು ಕುಟುಂಬಕ್ಕೂ ಆತಂಕ ಬೇಡವೆಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು. ನಗರದ ಧವಳಗಿರಿ ಬಡಾವಣೆ ಗಾರ್ಮೆಂಟ್ಸ್ ಬಳಿ ಮತ್ತು ಚಿತ್ರದುರ್ಗ ತಾಲೂಕಿನ ಹೊಸಕಲ್ಲಹಳ್ಳಿ ಗ್ರಾಮದಲ್ಲಿ ನೂತನ ಸಿಸಿ ರಸ್ತೆ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ದರು. ಈಗಾಗಲೇ ನಗರದ ಒಂದು ಘೋಷಿತ ಕೊಳಚೆ ಪ್ರದೇಶದ ಎಲ್ಲ ಅರ್ಹ ಕುಟುಂಬಗಳಿಗೂ ಹಕ್ಕು ಪತ್ರ ವಿತರಿಸಲಾಗಿದೆ. ಇನ್ನುಳಿದ ಅರ್ಹ ಕುಟುಂಬಗಳಿಗೂ ಶೀಘ್ರ ಹಕ್ಕು ಪತ್ರಗಳನ್ನು ವಿತರಿಸುವುದಾಗಿ ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ 14 ಲಕ್ಷ ರೂ.ಅನುದಾನದೊಂದಿಗೆ ಧವಳಗಿರಿ ಬಡಾವಣೆಯಲ್ಲಿ ಸಿ.ಸಿ.ರಸ್ತೆ ಮಾಡಲಾಗುತ್ತದೆ. ನಗರದ ವಿವಿಧೆಡೆಯೂ ರಸ್ತೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು. ನಗರಸಭೆ ಸದಸ್ಯೆ ಬಾಲಮ್ಮ,ಕುಡಾ ಆಯುಕ್ತ ಸೋಮ ಶೇಖರ್,ಸದಸ್ಯ ನಾಗರಾಜ್,ಬಿಜೆಪಿ ಜಿಲ್ಲಾ ಖಜಾಂಜಿ ಮಾಧುರಿಗಿರೀಶ್ ಮೊದಲಾದ ಪ್ರಮುಖರು ಇದ್ದರು.

ಹೊಸಕಲ್ಲಹಳ್ಳಿ

ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರದಿಂದ 25 ಲಕ್ಷ ರೂ.ವೆಚ್ಚದಲ್ಲಿ ಕೈಗೊಂಡಿರುವ ಸಿಸಿ ರಸ್ತೆ ಕಾಮಗಾರಿಗೆ ಹೊಸಕಲ್ಲಹಳ್ಳಿ ಗ್ರಾಮದಲ್ಲಿ ಶಾಸಕರು ಭೂಮಿ ಪೂಜೆ ನೆರವೇರಿಸಿದರು. ಗ್ರಾಮೀಣ ಭಾಗದಲ್ಲಿ ರಸ್ತೆ ನಿರ್ಮಾಣ ಮೊದಲು ನೀರಿನ ಪೈಪ್‌ಲೈನ್ ಇತ್ಯಾದಿ ಕೆಲಸಗಳಿದ್ದರೆ ಪೂರ್ಣಗೊಳಿಸಿ ಎಂದು ಗ್ರಾಪಂ ಹಾಗೂ ಸ್ಥಳೀಯ ನಿವಾಸಿಗಳಿಗೆ ಸೂಚಿಸಿದರು. ಗ್ರಾಪಂ ಸದಸ್ಯ ನಿಜಲಿಂಗಪ್ಪ,ಶ್ರೀಧರ್ ಸುನೀಲ್,ಚಂದ್ರಣ್ಣ,ತಿಪ್ಪೇಸ್ವಾಮಿ,ಓಬಳೇಶ್,ಅಂಜನ್ ಮತ್ತಿತರ ಪ್ರಮುಖರು ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net