

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಎಸ್ಡಿಎಂ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಅತ್ಯಾಧುನಿಕ ಸಿಟಿ ಸ್ಕ್ಯಾನ್ ಸೆಂಟರ್ಗಳನ್ನು ಎಸ್ಡಿಎಂ ವಿಶ್ವ ವಿದ್ಯಾಲಯದ ಕುಲಪತಿ ಡಾ. ಡಿ. ವೀರೇಂದ್ರ ಹೆಗ್ಗಡೆ ಇತ್ತೀಚೆಗೆ ಉದ್ಘಾಟಿಸಿದರು.
ಮಂಜುಶ್ರೀ ಬ್ಲಾಕ್ನ ನೆಲ ಮಹಡಿಯಲ್ಲಿ ಸ್ಥಾಪಿಸಿರುವ ಹೆಚ್ಚುವರಿ ಸ್ಕ್ಯಾನ್ ಸೆಂಟರ್, ಸಮ್ರಗ ಶಿಶು ಅಭಿವೃದ್ಧಿ ಕೇಂದ್ರವಾದ ಪರಿವರ್ಧನವನ್ನು ಉದ್ಘಾಟಿಸಿದರು. ಈ ಕೇಂದ್ರವು ಪೀಡಿಯಾಟ್ರಿಕ್, ಸೈಕಿಯಾಟ್ರಿಕ್, ಫಿಸಿಯೋಥರಪಿ ಮತ್ತು ವಾಕ್, ಶ್ರವಣ ವಿಭಾಗಗಳ ಜಂಟಿ ಯೋಜನೆಯಾಗಿದೆ. ಪರಿವರ್ಧನ ಕೇಂದ್ರವು ಉತ್ತರ ಕರ್ನಾಟಕದಲ್ಲಿ ಮಕ್ಕಳ ಪರಿಪೂರ್ಣ ಆರೈಕೆಯನ್ನು ಒದಗಿಸುವ ಮೊದಲ ಕೇಂದ್ರವಾಗಿದೆ.
ಎಸ್ಡಿಎಂ ಸಂಸ್ಥೆಗಳ ಉಪಾಧ್ಯಕ್ಷ ಡಿ. ಸುರೇಂದ್ರಕುಮಾರ, ಉಪಕುಲಪತಿ ಡಾ. ನಿರಂಜನ್ ಕುಮಾರ್, ವೈದ್ಯಕಿಯ ಅಧೀಕ್ಷಕ ಡಾ. ಕಿರಣ್ ಹೆಗ್ಡೆ, ಉಪ ವೈದ್ಯಕಿಯ ಅಧೀಕ್ಷಕ ಡಾ. ಮಖ್ದೂಮ್ ಕಿಲ್ಲೇದಾರ್, ವಿಕಿರಣಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರೀತಂ ಪಾಟೀಲ, ಮಕ್ಕಳ ತಜ್ಞ ವಿಭಾಗದ ಮುಖ್ಯಸ್ಥ ಡಾ. ವಿಜಯ್ ಕುಲಕರ್ಣಿ, ಇತರರು ಇದ್ದರು.