ದತ್ತಪೀಠದಲ್ಲಿ ಸಿ.ಟಿ.ರವಿ ವಿಶೇಷ ಪೂಜೆ

2 ckm 2
ದತ್ತ ಪೀಠದಲ್ಲಿ ಧ್ಯಾನಸ್ಥರಾಗಿರುವ ಸಿ.ಟಿ.ರವಿ.
Published on

ಚಿಕ್ಕಮಗಳೂರು: ಭಾನುವಾರ ಮಧ್ಯಾಹ್ನ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಆಗಮಿಸಿದ ಮಾಜಿ ಸಚಿವ ಸಿ.ಟಿ.ರವಿ, ಕಾರ್ಯಕರ್ತರೊಂದಿಗೆ ಮೊದಲು ತೆರಳಿದ್ದು ದತ್ತಪೀಠಕ್ಕೆ. ದತ್ತಪೀಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು, ದತ್ತ ಪಾದಕ್ಕೆ ಎದುರು ಕೆಲಕಾಲ ಕುಳಿತು ಧ್ಯಾನಸ್ಥರಾದರು. ಶ್ರೀ ಗುರು ದತ್ತಾತ್ರೇಯರ ಭಕ್ತರಾಗಿರುವ ಸಿ.ಟಿ.ರವಿ ಯಾವುದೇ ಕೆಲಸ ಮಾಡುವ ಮುನ್ನ ಶ್ರೀ ದತ್ತರ ಆಶೀರ್ವಾದ ಪಡೆಯುತ್ತಾರೆ. ಅದರಂತೆಯೇ ವಿಧಾನ ಪರಿಷತ್ ಟಿಕೆಟ್ ಘೋಷಣೆ ಬೆನ್ನಲ್ಲೇ ದತ್ತ ಪೀಠದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net