ಸಿ.ಟಿ.ರವಿಗೆ ವಿಪಕ್ಷ ನಾಯಕನ ಸ್ಥಾನ ಕೊಡಲಿ

k.s.eshwrappa and c.t.ravi
ಕೆ.ಎಸ್.ಈಶ್ವರಪ್ಪ ಮತ್ತು ಸಿ.ಟಿ.ರವಿ
Published on

ಶಿವಮೊಗ್ಗ: ಚುನಾವಣೆ ಮುಗಿದ ನಂತರ ಸಿ.ಟಿ.ರವಿ ಅವರನ್ನು ಎಂಎಲ್ಸಿ ಮಾಡಿದ್ದಾರೆ. ಅವರನ್ನು ಪ್ರತಿಪಕ್ಷದ ನಾಯಕನನ್ನಾಗಿ ಮಾಡಿದರೆ ಒಳ್ಳೆಯದು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ಬಿಜೆಪಿ ನನಗೆ ಯಾವುದೇ ಅನ್ಯಾಯ ಮಾಡಿಲ್ಲ. 35 ವರ್ಷ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ವಿಧಾನಸಭೆಯಲ್ಲಿ 65, ಲೋಕಸಭೆಯಲ್ಲಿ 17 ಸ್ಥಾನಕ್ಕೆ ಇಳಿದಿದ್ದು ಏಕೆ ಎಂಬುದು ನನ್ನ ಪ್ರಶ್ನೆ ಎಂದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಂದಲೇ ಇಡೀ ಲಿಂಗಾಯತ ಸಮಾಜ ಬಿಜೆಪಿ ಜತೆಗಿದೆ ಎಂಬ ಕಲ್ಪನೆ ಕೇಂದ್ರ ನಾಯಕರಲ್ಲಿದೆ. ಲಿಂಗಾಯತ ಒಂದೇ ಸಮುದಾಯ ಇದ್ದರೆ ಸಾಕಾ? ಹಿಂದುಳಿದ ವರ್ಗಗಳು ಬೇಡವೇ? ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳನ್ನು ನಿರ್ಲಕ್ಷ್ಯ ಮಾಡುತ್ತಿದೆ. ಕುರುಬರು, ಉಪ್ಪಾರರಿಗೆ ಅವಕಾಶ ನೀಡುವಂತೆ ಕೇಳಿದ್ದರೂ ಲೋಕಸಭೆಯಲ್ಲಿ ಟಿಕೆಟ್ ಕೊಡಲಿಲ್ಲ. ಹಿನ್ನೆಡೆಗೆ ಇದು ಸಹ ಕಾರಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net