ಸತತ ಸೋಲಿನಿಂದ ಕಾಂಗ್ರೆಸ್ ಹತಾಶೆ

Screenshot_20230310_112637_Google.jpg
Published on

ರಾಯಚೂರು: ಕಾಂಗ್ರೆಸ್ ಸತತ ಸೋಲಿನಿಂದ ಹತಾಶವಾಗಿದ್ದು, ಬಿಜೆಪಿ ವಿರುದ್ಧ ಇಲ್ಲಸಲ್ಲದ ಆರೋಪ‌ ಮಾಡುತ್ತಿದೆ. ಅನುಮಾನ, ಅಪಮಾನ, ಅಪಪ್ರಚಾರಗಳ ಮೂಲಕ ಕಾಂಗ್ರೆಸ್ ಬಿಜೆಪಿಯನ್ನು ಹಣಿಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಿಮಿತ್ತ ರಾಯಚೂರಿಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, ಕಾಂಗ್ರೆಸ್ ಈ ಸಲದ ಚುನಾವಣೆಯಲ್ಲಿಯೂ ಸೋಲು ಕಾಣುವುದು ನಿಶ್ಚಿತ. ಸ್ಪಷ್ಟ ಬಹುಮತ ಬಿಜೆಪಿ ಪರವಾಗಿ ಬರಲಿದೆ.

ಕೇಂದ್ರ ಸರ್ಕಾರ ರಾಜ್ಯಕ್ಕೆ ಏಮ್ಸ್ ಸಂಸ್ಥೆ ಮಂಜೂರು ಮಾಡಿಲ್ಲ. ಮಾಡಿದರೆ ರಾಯಚೂರಿಗೆ ಆದ್ಯತೆ ನೀಡಲಾಗುವುದು. ಏಮ್ಸ್ ಮಾದರಿ ಸಂಸ್ಥೆ ರಾಯಚೂರಿಗೆ ಮಂಜೂರು ಮಾಡಿದ್ದು, ಏಮ್ಸ್ ರೀತಿಯಲ್ಲಿಯೇ ಎಲ್ಲ ಸೌಲಭ್ಯಗಳು ಅದರಲ್ಲಿ ಲಭ್ಯವಾಗಲಿವೆ.

ಐಐಟಿ ವಿಚಾರದಲ್ಲಿ ರಾಯಚೂರಿಗೆ ಕಾಂಗ್ರೆಸ್ ನಿಂದ ಅನ್ಯಾಯ ಆಗಿತ್ತು. ಅದನ್ಮು ಸರಿಪಡಿಸಲು ಕೇಂದ್ರದ ಬಿಜೆಪಿ ಸರಕಾರವು ರಾಯಚೂರಿಗೆ ಐಐಐಟಿ ನೀಡಿತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net