ಲಾಕ್‌ಡೌನ್ ಉಲ್ಲಂಘಿಸಿ, ಪ್ರವಾಸಿ ತಾಣಗಳಲ್ಲಿ ಸಂಚರಿಸಿದ ಸಚಿವ ಸಿ.ಟಿ. ರವಿ

CT Ravi
Published on

ಬೆಂಗಳೂರು: ರಾಜ್ಯದಾದ್ಯಂತ ಸರ್ಕಾರವೇ ಭಾನುವಾರವಿಡೀ ಸಂಪೂರ್ಣ ಲಾಕ್‌ಡೌನ್ ಘೋಷಿಸಿದ್ದರೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ತಮ್ಮ ಬೆಂಬಲಿಗರೊಂದಿಗೆ ಪ್ರವಾಸಿ ತಾಣಗಳಲ್ಲಿ ಸಂಚರಿಸಿ ನಿಯಮ ಉಲ್ಲಂಘಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಇಡೀ ದಿನ ಮನೆಯಲ್ಲಿದ್ದು, ಯಾರಿಗೂ ತಮ್ಮ ಭೇಟಿಗೆ ಅವಕಾಶ ನೀಡಿಲ್ಲ. ಲಾಕ್‌ಡೌನ್ ಅನ್ನು ಗಂಭೀರವಾಗಿ ಪರಿಗಣಿಸುವಂತೆ ಸರ್ಕಾರವೇ ಸಾರ್ವಜನಿಕರಿಗೆ ತಾಕೀತು ಮಾಡಿದೆ. ಆದರೂ ಸಚಿವರೊಬ್ಬರು ಈ ರೀತಿ ಪ್ರವಾಸಿ ತಾಣಗಳಲ್ಲಿ ಬೆಂಬಲಿಗರ ಜತೆ ಸಂಚರಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಚಿಕ್ಕಮಗಳೂರಿನ ದೇವರಮನೆ, ಹೇಮಾವತಿ ನದಿಮೂಲ, ಬಲ್ಲಾಳರಾಯನದುರ್ಗ ಮುಂತಾದ ಸ್ಥಳಗಳಿಗೆ ಸಿ.ಟಿ. ರವಿ ಇಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರೊಂದಿಗೆ ಭೇಟಿ ನೀಡಿದ್ದರು. ರವಿ ಮಾಸ್ಕ್ ಧರಿಸಿದ್ದರೆ, ಕುಮಾರಸ್ವಾಮಿ ಮಾಸ್ಕ್ ಧರಿಸಿರಲಿಲ್ಲ. ಅವರಿಬ್ಬರ ಸುತ್ತಲೂ ಹತ್ತಿಪ್ಪತ್ತು ಜನ ಸೇರಿದ್ದರು. ಅವರಲ್ಲಿಯೂ ಬಹುತೇಕರು ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net