

ಹುಬ್ಬಳ್ಳಿ : ಬನಶ್ರೀ ಫೌಂಡೇಶನ್ನ ರೈತ ಸಬಲೀಕರಣ ಕಾರ್ಯಕ್ರಮದ ಭಾಗವಾಗಿ ಸಿಸ್ಕೋ ತಂಡದಿಂದ ವರೂರು ಗ್ರಾಮದಲ್ಲಿ ಮೂರು ದಿನಗಳವರೆಗೆ ಸಿಎಸ್ಆರ್ ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು.
200 ಸಸಿಗಳನ್ನು ನೆಟ್ಟು, 400ಕ್ಕೂ ಹೆಚ್ಚು ಮರಗಳಿಗೆ ಸುಣ್ಣ ಲೇಪಿಸಲಾಯಿತು. 900 ಗಿಡಗಳಿಗೆ ಗೊಬ್ಬರ ಹಾಕಿ, ಕಳೆ ತೆಗೆಯಲಾಯಿತು. 350ಕ್ಕೂ ಹೆಚ್ಚು ಗಿಡಗಳಿಗೆ ಕಳೆ ಚಾಪೆಗಳನ್ನು ಸ್ಥಾಪಿಸಲಾಯಿತು.
ಬನಶ್ರೀ ಫೌಂಡೇಶನ್ನ ರಿಷಿಕಾ ಕಾಂತ, ವಂಶಿಕಾ ಮೆಹ್ರಾ, ಅಖಿಲ ದೇಶಪಾಮಡೆ, ಆದರ್ಶ ಕೌಶಿಕ್, ಭರತ ಬಿ.ಆರ್., ಕಾರ್ತಿಕ ದುಸಾದ, ಫೌಂಡೇಶನ್ ಮತ್ತು ಸ್ಥಳೀಯ ಕೃಷಿ ಸಮುದಾಯದ ಅಧ್ಯಕ್ಷ ಮುರಳೀಧರ ಹಾಗೂ ಇತರರು ಪಾಲ್ಗೊಂಡಿದ್ದರು.