ಸಿಎಸ್‌ಐ ಆಸ್ಪತ್ರೆಯಲ್ಲಿ ‘ವಿಶ್ವ ಮಾನಸಿಕ ಆರೋಗ್ಯ ದಿನ’ ಆಚರಣೆ

Dr. Joshi
Published on

ಗದಗ: ಕೌಟುಂಬಿಕ ಸಮಸ್ಯೆ, ಖಿನ್ನತೆಗೆ ಒಳಗಾಗಿದ್ದರೆ ಅವರಿಗೆ ಸ್ನೇಹ ಮತ್ತು ಪ್ರೀತಿಯೊಂದಿಗೆ ಆಪ್ತವಾಗಿ ಸ್ಪಂದಿಸಿದಲ್ಲಿ, ತಜ್ಞ ವೈದ್ಯರ ಸಲಹೆ, ಚಿಕಿತ್ಸೆಯಿಂದ ಮಾನಸಿಕ ರೋಗಿ ಆಗುವದನ್ನು ತಡೆಗಟ್ಟಲು ಸಾಧ್ಯವಿದೆ ಎಂದು ಡಿ.ಎಚ್.ಓ ಡಾ.ಎಸ್.ಎಸ್.ನೀಲಗುಂದ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ಬೆಟಗೇರಿಯ ಸಿಎಸ್‌ಐ ಹಾಸ್ಪಿಟಲ್‌ನ ಪ್ರೇಮನಿಲಯ ಸಭಾಂಗಣದಲ್ಲಿ ಸಿ.ಎಸ್.ಐ ಆಸ್ಪತ್ರೆಯಿಂದ ಎರ್ಪಡಿಸಿದ್ದ ‘ವಿಶ್ವ ಮಾನಸಿಕ ಆರೋಗ್ಯ ದಿನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮಾನಸಿಕವಾಗಿ ನೊಂದುಕೊAಡಿರುವ ವ್ಯಕ್ತಿಗೆ ಸಮಾಧಾನ, ಆಪ್ತಸಮಾಲೋಚನೆ, ಮನಪರಿವರ್ತನೆ, ತಿಳುವಳಿಕೆಯ ಶಿಕ್ಷಣ ನೀಡುವ ಮೂಲಕ ಅವರಲ್ಲಿ ಜಾಗ್ರತಿ ಆತ್ಮವಿಶ್ವಾಸವನ್ನು ಮೂಡಿಸಬೇಕು. ಕುಟುಂಬ, ಬಂಧು-ಬಳಗ, ಸಮಾಜ, ಪ್ರಜ್ಞಾವಂತರು ಎಲ್ಲರೂ ಸೇರಿ ಮಾನಸಿಕತನ ಇಳಿಮುಖ ಮಾಡಬೇಕಿದೆ. ‘ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನ ಹಕ್ಕು’ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ಈ ವರ್ಷದ ಧ್ಯೇಯವನ್ನು ಸಾಕಾರಗೊಳಿಸೋಣ ಎಂದರು.
ಮುಖ್ಯ ಅತಿಥಿ ಚಿಕ್ಕಮಕ್ಕಳ ತಜ್ಞ ಡಾ.ಸಂಜೀವ ಜೋಶಿ ಮಾತನಾಡಿ ಕೋವಿಡ್ ಅವಧಿಯ ೩ ವರ್ಷ ಕಾಲ ಚಿಕ್ಕಮಕ್ಕಳ ಹಾಗೂ ಮಧ್ಯ ವಯಸ್ಕರರ ಮನೋಸ್ಥಿತಿಯಲ್ಲಿ ಕೊಂಚ ಬದಲಾವಣೆ ಕಂಡು ಬರುತ್ತದೆ, ಅದರಲ್ಲೂ ವಿಶೇಷವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್ ಪಾಠಗಳನ್ನು ಮೊಬೈಲ್ ಮುಖಾಂತರ ಮಾಡಿದ್ದರ ಪರಿಣಾಮವಾಗಿ ಮಕ್ಕಳು ಇಂದು ಮೊಬೈಲ್ ದಾಸರಾಗಿದ್ದಾರೆ.
ಮಕ್ಕಳು ಹಾಗೂ ಯುವಕರು ಮೊಬೈಲ್‌ನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಅವರಲ್ಲಿ ವಿಚಾರ, ತರ್ಕ, ಸಂವಹನ ಮಾಡುವ ಪ್ರವೃತ್ತಿಯೇ ಕುಗ್ಗಿದೆ. ಜಾಣ ವಿದ್ಯಾರ್ಥಿಗಳಲ್ಲಿ ವಿಚಾರಶಕ್ತಿ ಹಾಗೂ ಬುದ್ಧಿವಂತಿಕೆ ಇಳಿಮುಖವಾಗಿರುವದು ಆತಂಕಕಾರಿ ಸಂಗತಿ ಅಷ್ಟೇ ಅಲ್ಲ ಕ್ರಮೇಣ ಇದು ಮಾನಸಿಕ ಖಿನ್ನತೆಗೆ ರಾಜಮಾರ್ಗ ಆದ- ಆಗುತ್ತಿರುವದು ಕುಟುಂಬದಲ್ಲಿ, ಸಮಾಜದಲ್ಲಿ ಆತಂಕ ಸೃಷ್ಠಿಸಿದೆ. ಪಾಲಕ ಪೋಷಕರು ಈಗಲೇ ಎಚ್ಚೇತ್ತುಕೊಂಡು ಚಿಕ್ಕಮಕ್ಕಳನ್ನು, ಯುವಕರನ್ನು ಸ್ಮಾರ್ಟ್ ಫೋನ್ ಬಳಕೆಗೆ ಕಡಿವಾಣ ಹಾಕದಿದ್ದಲ್ಲಿ ಮಾನಸಿಕ ರೋಗಿಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂಬ ಕಳವಳ ವ್ಯಕ್ತಪಡಿಸಿದರು.
ಸಿ.ಎಸ್.ಐ ಆಸ್ಪತ್ರೆಯ ಮನೋವೈದ್ಯರಾದ ಡಾ.ಸಾಮ್ಯುವೆಲ್ ವೆಸ್ಲಿ ಅವರು ಪಾವರ್ ಪಾಯಿಂಟ್ ಮೂಲಕ ಜಾಗ್ರತಿ ಮೂಡಿಸಿ ಆಧುನಿಕತೆಯ ಇಂದಿನ ದಿನಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಹೆಚ್ಚಿದಂತೆ ನಾವಿಂದು ಸೋಮಾರಿ ಆಗುತ್ತಿದ್ದೇವೆ. ಚಲನವಲನ, ಕ್ರಿಯಾಶೀಲತೆ ಇಲ್ಲದೆ, ಮೈಮುರಿದು ಕೆಲಸ ಮಾಡದೇ ಮೊಬೈಲ್ ತಿಕ್ಕುತ್ತ ಕಾಲಹರಣ ಮಾಡುತ್ತಿದ್ದೇವೆ. ನಮ್ಮ ಸುತ್ತ ಏನು ನಡೆದಿದೆ. ಈ ಮೊಬೈಲ್‌ದಿಂದಾಗಿ ನಮ್ಮ ಪಕ್ಕದಲ್ಲಿ ಯಾರಿದ್ದಾರೆ ಎಂಬ ಪರಿವೇ ನಮಗಿಲ್ಲದಾಗಿದೆ ಎಂದರು.
ನಮ್ಮ ಹಳೇಯ ಸಂಪ್ರದಾಯಗಳು, ಮಾನವೀಯ ಸಂಬAಧಗಳು, ಸ್ನೇಹಗಳು ಗಟ್ಟಿಗೊಳ್ಳಬೇಕು. ಒಬ್ಬರಿಗೊಬ್ಬರು ಸ್ಪಂದಿಸುವ ವಿಚಾರ ವಿನಿಮಯ ಮಾಡಿಕೊಳ್ಳುವ ಮೂಲಕ ನಮ್ಮ ಮನಸ್ಸಿನ ಭಾವನೆಗಳ ಹಂಚಿಕೊAಡು ಒತ್ತಡವನ್ನು ನಿಗ್ರಹಿಸಿ ಮನೋಲ್ಲಾಸ, ಮನೋವಿಕಾಸಕ್ಕೆ ಮುಂದಾಗಬೇಕಿದೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಬದ್ಧತೆಯಿಂದ ಕಾರ್ಯ ಮಾಡಬೇಕಿದೆ ಎಂದರು.
ಪ್ರಾರAಭದಲ್ಲಿ ಸಿ.ಎಸ್.ಐ ಆಸ್ಪತ್ರೆಯ ಮುಖ್ಯಸ್ಥ ಡಾ.ಅಜೇಯರಾಜ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನೀಲ ನಡಕಟ್ಟಿನ ನಿರೂಪಿಸಿ ವಂದಿಸಿದರು. ವೇದಿಕೆಯ ಮೇಲೆ ಡಾ.ಸವಿತಾ ರಾಜು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವೈದ್ಯರು, ನರ್ಸಿಂಗ್ ಸಿಬ್ಬಂದಿ ವರ್ಗ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net