

ಮಂಗಳೂರು: ರಾಷ್ಟ್ರೀಯ ಕ್ಲಾಸಿಕಲ್ ಸ್ವೈನ್ ಫಿವರ್- ಹಂದಿಜ್ವರ (ಸಿಎಸ್‌ಎಫ್- ಸಿಪಿ) ನಿಯಂತ್ರಣ ಕಾರ್ಯಕ್ರಮದಡಿ (2023- 24) ಜಿಲ್ಲೆಯಾದ್ಯಂತ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಹಂದಿಗಳಿಗೆ ಉಚಿತವಾಗಿ ಸಿಎಸ್‌ಎಫ್- ಸಿಪಿ ಲಸಿಕಾ ಕಾರ್ಯಕ್ರಮವನ್ನು ಮಾರ್ಚ್ 1 ರಂದು ಆರಂಭಿಸಲಾಗಿದ್ದು, 15 ತನಕ ನಡೆಯಲಿದೆ.
ಈ ಲಸಿಕೆಯನ್ನು ಹಂದಿ ಸಾಕಾಣಿಕೆದಾರರು 2 ತಿಂಗಳು ಮೇಲ್ಪಟ್ಟ ವಯಸ್ಸಿನ ಹಂದಿಗಳಿಗೆ ಹಾಕಿಸಿಕೊಳ್ಳಬೇಕು. ಹಂದಿಗಳಲ್ಲಿ ಈ ರೋಗವು ದೊಡ್ಡ ಪ್ರಮಾಣದಲ್ಲಿ ಸಾವಿಗೆ ಕಾರಣವಾಗುವುದರಿಂದ ರೈತರು ಆರ್ಥಿಕವಾಗಿ ನಷ್ಟವನ್ನು ಅನುಭವಿಸುತ್ತಾರೆ. ಲಸಿಕೆ ಹಾಕಿಸುವುದೊಂದೇ ಕ್ಲಾಸಿಕಲ್ ಸ್ಟೈನ್ ಫೀವರ್ ರೋಗ ನಿಯಂತ್ರಿಸಲು ಇರುವ ಏಕೈಕ ಮಾರ್ಗಆದ್ದರಿಂದ ಸಾಕಾಣಿಕೆದಾರರು ಈ ಅವಧಿಯಲ್ಲಿ ತಮ್ಮ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗಳನ್ನು ಸಂಪರ್ಕಿಸಿ ತಮ್ಮ ಹಂದಿಗಳಿಗೆ ತಪ್ಪದೇ ಲಸಿಕೆ ಹಾಕಿಸುವಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ದ.ಕ ಉಪನಿರ್ದೇಶಕರು (ಆಡಳಿತ) ವಿನಂತಿಸಿದ್ದಾರೆ.