

ಮಡಿಕೇರಿ: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ನ ಕೊಡಗು ಜಿಲ್ಲಾ ಘಟಕದ ಸಮಿತಿಗೆ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಕೊಡಗು ಜಿಲ್ಲಾ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಾಧ್ಯಕ್ಷೆಯಾಗಿ ಸಿ.ಎಸ್.ಸುಮಿತ್ರ, ಪ್ರಧಾನ ಕಾರ್ಯದರ್ಶಿಯಾಗಿ ಕರಿನೆರವಂಡ ಡ್ಯಾನಿ ಕುಶಾಲಪ್ಪ, ಸದಸ್ಯರುಗಳಾಗಿ ಮಲ್ಲಂಡ ಶೃತಿ ಮುದ್ದಪ್ಪ, ಮೀತಲತಂಡ ಎಂ.ಇಸ್ಮಾಯಿಲ್, ಶರಣುಗೌಡ ಹರಗ, ಕಡೆಮಾಡ ಸುವಿತ್ ಸೋಮಣ್ಣ, ಚೊಕ್ಕಂಡ ನಝೀರ್ ಪಾಲಿಬೆಟ್ಟ ಹಾಗೂ ಎಂ.ಬಿ.ವಿನ್ಸೆಂಟ್ ವಿನೋದ್ ಅವರುಗಳನ್ನು ನೇಮಕ ಮಾಡಲಾಗಿದೆ ಎಂದು ಚಾಮೆರ ದಿನೇಶ್ ಬೆಳ್ಯಪ್ಪ ತಿಳಿಸಿದ್ದಾರೆ.
ರಾಷ್ಟ್ರಾಧ್ಯಂತ ತನ್ನ ಕಾರ್ಯ ಕ್ಷೇತ್ರವನ್ನು ಹೊಂದಿರುವ ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ ಮಕ್ಕಳಲ್ಲಿ ಸಾಹಿತ್ಯ, ದೇಶ ಪ್ರೇಮ, ಸಂಸ್ಕೃತಿ. ಪರಿಸರ ಕಾಳಜಿ ಸೇರಿದಂತೆ ನವ ಪೀಳಿಗೆಯನ್ನು ಕಟ್ಟಲು ನಾವೆಲ್ಲರೂ ಕಟಿಬದ್ಧರಾಗಿ ದುಡಿಯಬೇಕಿದೆ. ಈ ಕಾರಣಗಳನ್ನು ಇಟ್ಟುಕೊಂಡು, ಜಿಲ್ಲೆಯಾಧ್ಯಂತ ಸಂಘಟನೆಯನ್ನು ಬಲಿಷ್ಟವಾಗಿ ಕಟ್ಟಿ ಬೆಳೆಸುವ ಮೂಲಕ, ಜಿಲ್ಲೆಯ ಮಕ್ಕಳ ಸರ್ವತೋಮುಖ ಶ್ರೇಯೋಭೀವೃದ್ಧಿಗೆ ಶ್ರಮಿಸಬೇಕೆಂದು ಕೋರಿದ್ದಾರೆ.
ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಜಿಲ್ಲಾಧ್ಯಕ್ಷರ ಸೂಚನೆಯನ್ವಯ, ಸಂಘಟನೆಯ ಧೈಯ ಮತ್ತು ಉದ್ದೇಶಕ್ಕನುಸಾರವಾಗಿ ಜಿಲ್ಲಾ ಮತ್ತು ರಾಜ್ಯ ಸಮಿತಿಯ ಮುಂದಿನ ಆದೇಶದವರೆಗೆ ಅಧಿಕಾರದಲ್ಲಿದ್ದುಕೊಂಡು, ಸಂಸ್ಥೆಯ ಸರ್ವತೋಮುಖ ಬೆಳವಣಿಗೆಯಲ್ಲಿ ಶ್ರಮಿಸುವಂತೆ ತಿಳಿಸಿದ್ದಾರೆ.