ಸಿ.ಎಸ್.ಬಿಂಬಳಗಿ ಕಾಲೇಜು ಚಾಂಪಿಯನ್

01
Published on

ಬೆಳಗಾವಿ: ನಗರದ ಎಸ್‌ಕೆಇ ಶಿಕ್ಷಣ ಸಂಸ್ಥೆಯ ಆರ್‌ಪಿಡಿ ಮಹಾವಿದ್ಯಾಲಯದಿಂದ ಆಯೋಜಿಸಿದ್ದ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಅಂತರ್ ಕಾಲೇಜು ವಲಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಬುಧವಾರ ರಾಮದುರ್ಗದ ಸಿ.ಎಸ್.ಬಿಂಬಳಗಿ ಮಹಾವಿದ್ಯಾಲಯ ಚಾಂಪಿಯನ್‌ಪಟ್ಟ ಮುಡಿಗೇರಿಸಿಕೊಂಡಿತು.

ಪಂದ್ಯಾವಳಿಯಲ್ಲಿ ಜಿಲ್ಲೆಯ ಎಲ್ಲ ತಾಲೂಕಗಳ 18 ತಂಡಗಳು ಭಾಗವಹಿಸಿದ್ದವು. ರಾಮದುರ್ಗ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ ಹಾಗೂ ಖಾನಾಪುರದ ಮರಾಠಾ ಮಂಡಳ್ ಕಾಲೇಜು ಮೂರನೇ ಸ್ಥಾನ ಪಡೆಯಿತು. ಬೆಳಗಾವಿಯ ಜಿಎಸ್‌ಎಸ್ ಕಾಲೇಜು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಎಸ್‌ಕೆಇ ಸಂಸ್ಥೆಯ ಗೌರವ ಕಾರ್ಯದರ್ಶಿ ವಿ.ಎಲ್.ಅಜಗಾಂಕರ, ಆರ್‌ಸಿಯು ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಜಗದೀಶ ಗಸ್ತಿ, ಪ್ರಭಾರಿ ಪ್ರಾಚಾರ್ಯ ಎಸ್.ಎ.ನಾಯಕ, ಜಿಮಖಾನ ಉಪಾಧ್ಯಕ್ಷ ಪ್ರೊ.ಸಿ.ಎಂ.ಮುನ್ನೋಳ್ಳಿ , ಪ್ರೊ.ಎಸ್.ಎಸ್.ಶಿಂಧೆ, ಡಾ.ಆರ್.ಜೆ.ಪೋವಾರ, ಆರ್‌ಪಿಡಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರೊ.ರಾಮಕೃಷ್ಣ ಎನ್. ಸೇರಿ ಇತರರು ಇದ್ದರು. ಪ್ರೊ.ಎಸ್.ಎಂ.ಚೌಗಲಾ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net