

ಉಡುಪಿ: ಜಿಲ್ಲೆಯಲ್ಲಿ ಸಿಆರ್ಝೆಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವುಗೊಳಿಸಿ ಮಾರಾಟ ಮಾಡುವ ಪ್ರಕ್ರಿಯೆ ನಿಷೇಧಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಚೆನ್ನೈ ಪೀಠ ಆದೇಶ ಹೊರಡಿಸಿದೆ.
ಪರಿಸರದ ಹಿತದೃಷ್ಟಿಯಿಂದ ಉಡುಪಿಯ ಸಿಆರ್ಝೆಡ್ ನದಿಗಳಲ್ಲಿ ಮರಳು ತೆಗೆಯುವ ನೆಪದಲ್ಲಿ ನಡೆಯುತ್ತಿದ್ದ ಮರಳುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಮೀನುಗಾರಿಕೆ ದೋಣಿಗಳಿಗೆ ಸಂಚಾರಕ್ಕೆ ತಡೆಯುಂಟಾದರೆ ಅಂಥ ಸಂದರ್ಭದಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಬಹುದು. ಹೇಗೆ ತೆಗೆದ ಮರಳನ್ನು ಮಾರಾಟ ಮಾಡಬಾರದು. ಈ ಮರಳನ್ನು ನದಿ ಪಾತ್ರದ ತಗ್ಗು ಪ್ರದೇಶಗಳನ್ನು ಸಮತಟ್ಟುಗೊಳಿಸಲು, ಕಡಲತೀರಗಳಲ್ಲಿ ಮರಳಿನ ಪೋಷಣೆ ಮತ್ತು ನದಿ ದಡಗಳನ್ನು ಬಲಪಡಿಸಲು ಮಾತ್ರ ಬಳಸಬೇಕು ಎಂದು ಸೂಚಿಸಿದೆ.
ಮರಳು ದಿಬ್ಬ ತೆರವುಗೊಳಿಸುವ ಅನುಮತಿಗಳನ್ನು ಸ್ಥಳೀಯ ಸಮುದಾಯವನ್ನು ಹೊರತುಪಡಿಸಿ ಇತರ ವ್ಯಕ್ತಿಗಳಿಗೆ ಅವಕಾಶ ನೀಡಬಾರದು ಎಂದು ಸಮಿತಿಯು ಖಚಿತಪಡಿಸಿಕೊಳ್ಳಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ.
ಮರಳು ತೆಗೆಯುವ ನೆಪದಲ್ಲಿ ಸಿಆರ್‌ಝಡ್ ವಲಯದ ಆ ಪ್ರದೇಶದಲ್ಲಿ ಯಾವುದೇ ಅಕ್ರಮ ಮರಳುಗಾರಿಕೆ ನಡೆಯದಂತೆ ನೋಡಿಕೊಳ್ಳಲು ಜಿಲ್ಲಾ ಮೇಲ್ವಿಚಾರಣಾ ಸಮಿತಿಗೆ ಸೂಚಿಸಲಾಗಿದೆ.