ನಿಯಮ ಪಾಲಿಸದ ಕ್ರಷರ್‌ಗಳ ಪರವಾನಗಿ ರದ್ದುಗೊಳಿಸಿ

PHOTO-1 (1).jpgGGGG
Published on

ಚಿತ್ರದುರ್ಗ:ನಿಯಮಗಳನ್ನು ಉಲ್ಲಂಘಿಸುತ್ತಿರುವ ಕ್ರಷರ್‌ಗಳ ಪರವಾನಗಿ ರದ್ಧ ಪಡಿಸುವಂತೆ ಕರುನಾಡ ವಿಜಯಸೇನೆ ಕಾರ್ಯಕರ್ತರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರ ಕಚೇರಿ ಎದುರು ಗುರುವಾರ ಪ್ರತಿಭಟಿಸಿ,ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನಿಯಮಗಳನ್ನು ಪಾಲಿಸದ ಕ್ರಷರ್‌ಗಳಿಂದಾಗಿ ಹಲವು ಗ್ರಾಮಗಳ ಮನೆಗಳು ಬಿರುಕು ಬಿಟ್ಟಿವೆ. ಬೆಳೆಗಳು ನಾಶವಾಗುತ್ತಿದ್ದು,ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿದೆ.

ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ತೆಗೆದು ಕೊಳ್ಳದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಪ್ರತಿಭಟನಾ ನಿರತರು ಎಚ್ಚರಿಸಿದರು. ವಿಜಯ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ರವಿಕುಮಾರ್,ವೀಣಾಗೌರಣ್ಣ,ಅವಿನಾಶ್,ಬಸವರಾಜ್,ಜಗದೀಶ್,ನಿಸಾರ್‌ಅಹಮದ್, ರೇಣುಕಮ್ಮ, ಕಮಲ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net