ಬರಗೇನಹಳ್ಳಿಯಲ್ಲಿ ಕ್ರಷರ್​ ಕಿರಿಕಿರಿ

24 06 2025_BGR_RURAL_PAGE_2
ಸೋಂಪುರ ಹೋಬಳಿ ಬರಗೇನಹಳ್ಳಿ ಗ್ರಾಮದಲ್ಲಿ ಸರ್ವೇಗೆ ಬಂದಿದ್ದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಪರಿಸರ ಇಲಾಖೆ ಅಧಿಕಾರಿ ಭೀಮಸಿಂಗ್​ ಬೋಗಿ, ಡಿಎಂಜಿ ಮೂರ್ತಿ, ಅರಣ್ಯ ಅಧಿಕಾರಿ ಮಂಜುನಾಥ , ದಾಬಸ್​ಪೇಟೆ ನೀರಿಕ್ಷಕ ಬಿ.ರಾಜು ಇದ್ದರು.
Published on

ದಾಬಸ್​ಪೇಟೆ : ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ ಬರಗೇನಹಳ್ಳಿ ವ್ಯಾಪ್ತಿಯಲ್ಲಿ ಕೆಐಎಡಿಬಿ ಜಮೀನಿನಲ್ಲಿ ಆರಂಭಿಸಿರುವ ಜಲ್ಲಿ ಕ್ರಷರ್​ನಿಂದ ಈ ಭಾಗದ ಜನರು ಕಿರಿಕಿರಿ ಎದುರಿಸುತ್ತಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮಾಂತರ ಪರಿಸರ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ಈ ಪ್ರದೇಶದ ಪರಿಶೀಲನೆಗೆ ಬಂದ ವೇಳೆ ಸ್ಥಳಿಯರು ಅಧಿಕಾರಿಗಳ ವಿರುದ್ಧ ಮುಗಿಬಿದ್ದು ಈ ಭಾಗದಲ್ಲಿ ಅನಧಿಕೃತವಾಗಿ ಕ್ರಷರ್​ ನಡೆಸಲು ಅನುಮತಿ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೋಂಪುರ ಹೋಬಳಿ ಬರಗೇನಹಳ್ಳಿ, ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶವಾಗಿದ್ದು, ಈ ಭಾಗದಲ್ಲಿ ಸರಿಯಾದ ರೀತಿ ಸರ್ವೇ ನಡೆಸಿ ಇಲಾಖೆಗಳು ಸಮರ್ಪಕ ಮಾಹಿತಿ ನೀಡದ ಪರಿಣಾಮ ಕ್ರಷರ್​ ಸದ್ದು ಕೇಳುವಂತಾಗಿದೆ. ಅಧಿಕಾರಿಗಳ ರ್ನಿಲಕ್ಷ$್ಯದಿಂದ ಗ್ರಾಮದ ಜನರು ವ್ಯಥೆಪಡುವಂತಾಗಿದೆ ಎಂದು ಅಲವತ್ತುಗೊಂಡರು.

ಬ್ಲಾಸ್ಟ್​ಗೆ ಗೋಡೆ ಬಿರುಕು : ಕ್ರಷರ್​ನಲ್ಲಿ ಕಲ್ಲು ಸಿಡಿಸುವ ಭಾರಿ ಶಬ್ದಕ್ಕೆ ಈ ಭಾಗದಲ್ಲಿ ಹಲವು ಮನೆಗಳ ಗೋಡೆಗಳು ಬಿರುಕುಬಿಟ್ಟಿವೆ. ಈಗಾಗಲೇ ಇಲ್ಲಿನ ಮೂರು ಹಸುಗಳು ಇದರಿಂದ ಮೃತಪಟ್ಟಿವೆ. ಶಬ್ದಕ್ಕೆ ಭೂಮಿ ಅದುರಿದ ಅನುಭವವಾಗುತ್ತಿದೆ. ಜೀವಭಯದಲ್ಲಿ ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳಿಯರು ಅಧಿಕಾರಿಗಳ ಮುಂದೆ ಗ್ರಾಮದ ಜಯಣ್ಣ ಅಳಲು ತೋಡಿಕೊಂಡರು.

ಮಾಲಿನ್ಯ ಕಿರಿಕಿರಿ : ಸೋಂಪುರ ಹೋಬಳಿಯ ಬಿಲ್ಲಿನಕೋಟೆ ಗ್ರಾಮದಲ್ಲಿ ಸರ್ವೇ ನಡೆಸಿ ಕ್ರಷರ್​ ನಡೆಸಲು ಅನುಮತಿ ನೀಡಲಾಗಿದೆ. ಆದರೆ, ಇಲ್ಲಿನ ಮಾಲೀಕರು ಬರಗೇನಹಳ್ಳಿಯಲ್ಲಿ ಕ್ರಷರ್​ ಆರಂಭಿಸಿದ್ದಾರೆ. ಇದರಿಂದ ಗ್ರಾಮದಲ್ಲಿ ವಿಪರೀತ ಶಬ್ದ ಮಾಲಿನ್ಯ ಉಂಟಾಗಿದೆ. ಇಲ್ಲಿನ ಧೂಳಿನಿಂದ ಪರಿಸರ ಮಾಲಿನ್ಯವಾಗುತ್ತಿದೆ. ಬೆಳೆಗಳ ಮೇಲೆ ಧೂಳು ಆವರಿಸಿ ನಷ್ಟ ಎದುರಿಸುವಂತಾಗಿದೆ ಎಂದು ಗ್ರಾಮದ ಬಿ.ಎನ್​.ಪರಮೇಶ ದೂರಿದರು. ಸುಮಾರು 124 ಎಕರೆ ಜಮೀನನ್ನು ಖಾಸಗಿ ಕಂಪನಿ ಪಡೆದಿದೆ. ಮಳೆಗಾಲದಲ್ಲಿ ್ಯಾಕ್ಟರಿ ಪಕ್ಕದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ಪೊಲೀಸರ ಮೂಲಕ ಬೆದರಿಸುತ್ತಾರೆ ಎಂದು ಗ್ರಾಮದ ಮುಖಂಡ ಬಿ.ಆರ್​.ಪುಟ್ಟಗಂಗಯ್ಯ ಅಳಲು ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net