

ಚನ್ನಮ್ಮನ ಕಿತ್ತೂರು: ತಾಲೂಕಿನ ತಿಗಡೊಳ್ಳಿ, ದೇಗಾಂವ, ಉಗರಖೋಡ, ಅವರಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಸಿನ ಮನೆಗಳಿಗೆ ಕ್ರಷ್ ಸಂಸ್ಥೆಯ ಸಂಯೋಜಕ ಚಿದಾನಂದ ಸ್ವಾಮಿ ಶುಕ್ರವಾರ ಭೇಟಿ ನೀಡಿದರು.
ಕೂಸಿನ ಮನೆಯ ಪ್ರಗತಿ ಪರಿಶೀಲನೆ, ಕೇರ್ ಟೇಕರ್ಸ್‌ಗಳ ಕಾರ್ಯವೈಖರಿ, ದಾಖಲಾತಿ ನಿರ್ವಹಣೆ ಮತ್ತು ಮೂಲಸೌಲಭ್ಯ ಹಾಗೂ ಕೂಸಿನ ಮನೆಯಿಂದ ಮಕ್ಕಳಿಗೆ ಪ್ರಯೋಜನ ಒದಗುತ್ತಿರುವ ಕುರಿತು ಮಾಹಿತಿ ಕಲೆಹಾಕಿದರು.
ತಾಲೂಕಿನ ತಿಗಡೊಳ್ಳಿ ಕೂಸಿನ ಮನೆ ಕೇಂದ್ರ ಮಾದರಿಯಾಗಿಟ್ಟುಕೊಂಡು ಉಳಿದ ಕೂಸಿನ ಮನೆ ಕೇಂದ್ರಗಳಿಗೆ ಸೌಲಭ್ಯ ಕಲ್ಪಿಸುವಂತೆ ಸಲಹೆ ನೀಡಿದರು.
ಸಹಾಯಕ ನಿರ್ದೇಶಕರಾದ ಮಹಮ್ಮದಗೌಸ್ ರಿಷಲ್ದಾರ್, ಪಿಡಿಒ ಮಂಜುನಾಥ ಕುಟಾಳಿ, ರವಿ ಉಡಕೇರಿ, ಜಗದೀಶ ಗೌಡರ, ಶಿವಲಿಂಗಯ್ಯ ಗುರುವೈನವರ, ಅಂಗನವಾಡಿ ಮೇಲ್ವಿಚಾರಕಿ ಎಸ್.ಎಂ.ಹಿರೇಮಠ, ಚನ್ನಮ್ನ ನಾಯಕ, ಐಇಸಿ ಸಂಯೋಜಕಿ ಎಸ್.ಬಿ. ಜವಳಿ, ಬಿಎಫ್‌ಟಿ ಸೋಮಶೇಖರ ಚುಳಕಿ, ಕಲ್ಲಪ್ಪ ಚಕಡಿ, ಮಂಜುನಾಥ ಅಗಸರ, ಕೂಸಿನ ಮನೆ ಆರೈಕೆದಾರರು ಹಾಗೂ ಗ್ರಾಪಂ ಸಿಬ್ಬಂದಿ ಹಾಜರಿದ್ದರು.