ರೈತನನ್ನು ಬೆಂಕಿಗೆ ತಳ್ಳಿ ಕ್ರೌರ್ಯ

Crime Logo
Published on

ಚಿತ್ರದುರ್ಗ: ಜಮೀನಿನ ಬದುವಿಗೆ ಬೆಂಕಿ ಇಟ್ಟಿದ್ದನ್ನು ಪ್ರಶ್ನಿಸಿದ್ದಕ್ಕೆ ಧಗಧಗನೇ ಉರಿಯುತ್ತಿದ್ದ ಬೆಂಕಿಗೆ ರೈತನನ್ನು ನೂಕಿ ಕ್ರೌರ್ಯ ಮೆರೆದ ದುರ್ಘಟನೆ ತಾಲೂಕಿನ ಸೊಂಡೆಕೊಳ ಗ್ರಾಮದಲ್ಲಿ ಬುಧವಾರ ನಡೆದಿದೆ.

ಸುಟ್ಟು ಗಾಯಗೊಂಡ ರೈತ ಶಿವಕುಮಾರ್ (56) ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಗ್ರಾಮದ ಸಹೋದರರಿಬ್ಬರೂ ಆರೋಪಿತರಾಗಿದ್ದು, ಅದರಲ್ಲಿ ನಿಜಲಿಂಗಪ್ಪ ಎಂಬುವವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಮ್ಮ ಮೇಲೂ ಹಲ್ಲೆ ನಡೆದಿದ್ದು, ಕೈ ಮೂಳೆ ಮುರಿದಿದೆ ಎಂದು ಮತ್ತೊಬ್ಬ ಆರೋಪಿ ಗೋಪಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆ ಹಿನ್ನೆಲೆ: ಇಬ್ಬರ ಜಮೀನುಗಳ ಮಧ್ಯದ ಬದುವಿಗೆ ಬೆಂಕಿ ಇಟ್ಟಿದ್ದಕ್ಕೆ ಕೃತ್ಯ ನಡೆದಿದೆ. ಶಿವಕುಮಾರ್ ಜಮೀನು ಪಕ್ಕದಲ್ಲೇ ಜಮೀನು ಹೊಂದಿರುವ ನಿಜಲಿಂಗಪ್ಪ, ಗೋಪಾಲಪ್ಪ ಬೆಂಕಿ ಹಾಕಿದ್ದರು ಎನ್ನಲಾಗಿದೆ. ಇದರಿಂದ ಶಿವಕುಮಾರ್‌ಗೆ ಸೇರಿದ್ದ ಅಡಿಕೆ ಹಾಗೂ ತೆಂಗಿನ ಮರ ನಾಶವಾಗಿವೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net