ಹಣಕ್ಕಾಗಿ ಬಟ್ಟೆ ಬಿಚ್ಚಿ ಗುಪ್ತಾಂಗಕ್ಕೆ ಶಾಕ್​ ಟ್ರೀಟ್ಮೆಂಟ್​

Crime Logo
Published on

ಕಲಬುರಗಿ: ಹಣಕ್ಕಾಗಿ ಬೇಡಿಕೆ ಇಟ್ಟು ಸೆಕೆಂಡ್ ಹ್ಯಾಂಡ್ ಕಾರು ಮಾರಾಟಗಾರ ಹಾಗೂ ಆತನ ಸ್ನೇಹಿತರನ್ನು ಕೂಡಿ ಹಾಕಿ, ಬಟ್ಟೆ ಬಿಚ್ಚಿ ಗುಪ್ತಾಂಗಕ್ಕೆ ಬ್ಯಾಟರಿ ಶಾಕ್ ನೀಡಿ, ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಘಟನೆ ಗುಲ್ಬರ್ಗ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸೇಡಂ ತಾಲೂಕಿನ ದೇವನೂರದ ಅರ್ಜುನಪ್ಪ ಹಣಮಂತ, ಇಸ್ಲಾಮಾಬಾದ್ ಕಾಲನಿಯ ಮಹ್ಮದ್ ಸಮಿರೊದ್ದೀನ್ ಮತ್ತು ಹೀರಾಪುರದ ಅಬ್ದುಲ್ ರೆಹಮಾನ್ ಹಲ್ಲೆಗೆ ಒಳಗಾದವರು.
ಗಣೇಶ ನಗರದ ನಿವಾಸಿಗಳಾದ ಇಮ್ರಾನ್ ಪಟೇಲ್, ಮಹ್ಮದ್ ಮತೀನ್, ಮುಹಾಹೀರ್ ನಗರ ನಿವಾಸಿ ಮಹ್ಮದ್ ಜಿಯಾ ಅಲ್ ಹುಸೈನಿ, ಇಸ್ಲಾಮಾಬಾದ್ ಕಾಲನಿಯ ಮಹ್ಮದ್ ಅಫಜ್ಲ್ ಸೈಕ್, ಮಿಲತ್ ನಗರದ ಹುಸೈನ್ ಸೈಕ್, ಚಿತ್ತಾಪುರದ ರಮೇಶ ದೊಡ್ಡಮನಿ, ವಾಡಿಯ ಸಾಗರ ಶ್ರೀಮಂತ ಸೇರಿ ಇತರರ ವಿರುದ್ಧ ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ: ಅರ್ಜುನಪ್ಪ ಬೆಂಗಳೂರಿನಿಂದ ಸೆಕೆಂಡ್ ಹ್ಯಾಂಡ್ ಕಾರ್‌ಗಳನ್ನು ತಂದು ಮಾರುತ್ತಿದ್ದ. ಪರಿಚಯಸ್ಥ ರಮೇಶ ದೊಡ್ಡಮನಿ ತಾಲೂಕು ಅಧ್ಯಕ್ಷನಾಗಿದ್ದು ಸೆಕೆಂಡ್ ಹ್ಯಾಂಡ್ ಕಾರು ಕೊಡಿಸುವಂತೆ ಅರ್ಜುನಪ್ಪಗೆ ಕೋರಿದ್ದ. ಆಗ ೬ ಲಕ್ಷ ರೂ.ನ ಸೆಕೆಂಡ್ ಹ್ಯಾಂಡ್ ಕಾರ್ ಇರುವುದಾಗಿ ಹೇಳಿ, ಒಂದು ಲಕ್ಷ ರೂ. ಕಮೀಷನ್ ಕೇಳಿದ್ದ. ಮೇ ೪ರಂದು ಚಿತ್ತಾಪುರದಿಂದ ಕಾರಿನಲ್ಲಿ ಅರ್ಜುನಪ್ಪ ಮತ್ತು ರಮೇಶ ಕಾರು ಮಾರಾಟಗಾರ ಅಬ್ದುಲ್ ರಹೆಮಾನ್ ಹೇಳಿದ ನಾಗನಹಳ್ಳಿ ಕ್ರಾಸ್‌ಗೆ ಬಂದಿದ್ದಾರೆ. ಅಬ್ದುಲ್ ತನ್ನ ಪರಿಚಯಸ್ಥ ಸಮಿರೊದ್ದೀನ್‌ನನ್ನು ಕರೆದುಕೊಂಡು ಬಂದಿದ್ದರು.
ಇಮ್ರಾನ್ ಬಳಿ ಹಣ ತರೋಣವೆಂದ ರಮೇಶ, ಮೂವರು ಸಂತ್ರಸ್ತರನ್ನು ಹಾಗರಗಾ ರಸ್ತೆಯ ಮನೆಯೊಂದಕ್ಕೆ ಕರೆದೊಯ್ದಿದ್ದಾನೆ. ಇಮ್ರಾನ್ ಸೇರಿ ಇಬ್ಬರು ಟೆಸ್ಟ್ವ್‌ಡ್ರೈವಗಾಗಿ ಕಾರು ತೆಗೆದುಕೊಂಡು ಹೋಗಿ ವಾಪಸ್ ಬಂದವರೇ ಮೂವರನ್ನು ಅವಾಚ್ಯ ಪದಗಳಿಂದ ನಿಂದಿಸಿ, ಕಾರಿನಿಂದ ಎಳೆದೊಯ್ದು ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. 10ರಿಂದ 12 ಮಂದಿ ಸುತ್ತುವರಿದು ಮೂವರ ಬಟ್ಟೆ ಬಿಚ್ಚಿಸಿದರು.
ಇಮ್ರಾನ್ ಬ್ಯಾಟರಿ ಕರೆಂಟ್‌ನಿಂದ ಮೂವರ ಗುಪ್ತಾಂಗಕ್ಕೆ ಶಾಕ್ ಕೊಟ್ಟ. ಕಾರು ಕೊಡಲು ತಡ ಮಾಡಿದ್ದೀರಾ. ಎ¯್ಲÉಲ್ಲಿ ಕಾರು ಕೊಟ್ಟಿದ್ದಿರೋ ಅವೆಲ್ಲ ನಮಗೆ ಕೊಡಬೇಕು. ನಾವು ಹೇಳಿದಂತೆ ಕೇಳದಿದ್ದರೆ, ಜೀವಸಹಿತ ಹೋಗಲ್ಲ. ೧೦ ಲಕ್ಷ ರೂ. ಕೊಡಬೇಕು ಎಂದು ಹೆದರಿಸಿದ್ದಾರೆ. ಬ್ಯಾಟರಿಯಿಂದ ಗುಪ್ತಾಂಗಕ್ಕೆ ಶಾಕ್ ನೀಡಿದ್ದಾರೆ. ಮತೀನ್ ಸೇರಿ ಇತರೆ ೧೨ ಮಂದಿ ಬಡಿಗೆಗಳಿಂದ ಹಲ್ಲೆ ಮಾಡಿ ತೀವ್ರ ಗಾಯಗೊಳಿಸಿದರು. ಸಿಗರೇಟ್‌ನಿಂದ ಸುಟ್ಟು ಗಾಯ ಮಾಡಿದರು. ಇಮ್ರಾನ್ ಅವರು ಅಬ್ದುಲ್ ಎದೆಗೆ ಲಾಂಗ್‌ಗಳಿಂದ ಚುಚ್ಚಿ, ಬೆನ್ನಿಗೂ ಸವರಿದರು ಎಂದು ಸಂತ್ರಸ್ತರು ದೂರಿನಲ್ಲಿ ಆರೋಪಿಸಿದ್ದಾರೆ.
ಕೂಡಿ ಹಾಕಿದ ಮರುದಿನ ಮೇ ೫ರಂದು ಇಮ್ರಾನ್ ಅವರು ಅರ್ಜುನಪ್ಪಗೆ ಜೀವಬೆದರಿಕೆ ಹಾಕಿದ. ಅರ್ಜುನಪ್ಪ ತಮ್ಮ ಪತ್ನಿಗೆ ಫೋನ್ ಮಾಡಿ, ೫೦,೦೦೦ ರೂ. ತನ್ನ ಖಾತೆಗೆ ಜಮಾ ಮಾಡಿಸಿಕೊಂಡ. ಅರ್ಜುನಪ್ಪನ ಮೊಬೈಲ್ ಕಿತ್ತುಕೊಂಡು ಪಾಸ್‌ವರ್ಡ್, ಫೋನ್ ಪೇ ಮಾಹಿತಿ ಪಡೆದು, ೪,೨೦೦ ರೂ. ಖರ್ಚು ಮಾಡಿದ. ಸಂಜೆ ೭ರ ಒಳಗೆ ೭ ಲಕ್ಷ ರೂ. ಕೊಡುವಂತೆ ಜೀವ ಬೆದರಿಕೆ ಹಾಕಿದ. ತಿಂಗಳಿಗೆ ೧ ಲಕ್ಷ ರೂ. ಕಮಿಷನ್ ಕೊಡುವಂತೆ ಕುತ್ತಿಗೆ ಬಿಗಿಯಾಗಿ ಹಿಡಿದು ತಾಕೀತು ಮಾಡಿದ್ದ. ಸಂಜೆ ಪೊಲೀಸರು ಬರುವುದನ್ನು ಕಂಡು ಸ್ಥಳದಿಂದ ಪರಾರಿಯಾದರು ಎಂದು ಆಪಾದಿಸಿz್ದÁರೆ. ಸಂತ್ರಸ್ತರ ದೂರಿನ ಅನ್ವಯ ಆರೋಪಿತರ ವಿರುದ್ಧ ಕೊಲೆ ಯತ್ನ ಸೇರಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣದಾಖಲಾಗಿದೆ.

ಕಲಬುರಗಿ ನಗರದಲ್ಲಿ ಕೆಲವರು ಕೆಲ ವ್ಯಕ್ತಿಗಳನ್ನು ವಿವಸ್ತçಗೊಳಿಸಿ ಹೊಡೆಯುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದು, ಈ ಕುರಿತು ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಏಳು ಆರೋಪಿಗಳನ್ನು ಬಂಧಿಸಲಾಗಿದೆ.
| ಆರ್.ಚೇತನ
ಪೊಲೀಸ್ ಕಮೀಷನರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net