ವಿದ್ಯಾರ್ಥಿಯ ಅರೆಬೆತ್ತಲೆ ಮೆರವಣಿಗೆ

Crime Logo
Published on

ಕಲಬುರಗಿ: ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರದ ಪೂಜೆಗೆ ಕರೆದಾಗ ಬಾರದ್ದರಿಂದ ಕುಪಿತಗೊಂಡ ಹಾಸ್ಟೆಲ್ ವಿದ್ಯಾರ್ಥಿಗಳು ಸಹಪಾಠಿಯನ್ನು ಅರೆಬೆತ್ತಲೆಗೊಳಿಸಿ ತಲೆ ಮೇಲೆ ಬಾಬಾಸಾಹೇಬರ ಫೋಟೋ ಇಟ್ಟು ಗುರುವಾರ ಮೆರವಣಿಗೆ ಮಾಡಿದ್ದು, ಶುಕ್ರವಾರ ಸಂಜೆ ಬೆಳಕಿಗೆ ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೈಕೋರ್ಟ್ ಹತ್ತಿರದ ಸರ್ಕಾರಿ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ. ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿ ಮತ್ತು ಹಿಂಸಿಸಿದವರೆಲ್ಲರೂ ಅಪ್ರಾಪ್ತರು. ಅಲ್ಲದೆ ಶೋಷಿತ ಸಮುದಾಯದವರಾಗಿದ್ದಾರೆ.
ಹಾಸ್ಟೆಲ್‌ನಲ್ಲಿ ಪ್ರತಿವಾರ ಡಾ.ಅಂಬೇಡ್ಕರ್ ಭಾವಚಿತ್ರದ ಪೂಜೆ ಮಾಡುತ್ತಾರೆ. ಈ ಮೊದಲು ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿ ಪೂಜೆಗೆ ಹೋಗುತ್ತಿದ್ದ. ಆದರೆ ಗುರುವಾರ ಕರೆದಾಗ ಅನಿವಾರ್ಯ ಕಾರಣದಿಂದ ಹೋಗಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಕೆಲವರು ಆತನಿಗೆ ಮನಬಂದAತೆ ಥಳಿಸಿದ್ದಲ್ಲದೆ ಬಟ್ಟೆ ಬಿಚ್ಚಿಸಿ ಒಳಉಡುಪು ಮಾತ್ರ ಬಿಟ್ಟು ತಲೆ ಮೇಲೆ ಅಂಬೇಡ್ಕರ್ ಪೋಟೋ ಇಟ್ಟು ಜಗತ್ ಸರ್ಕಲ್ ಕಡೆ ಕೊಂಡೊಯ್ಯುತ್ತಿದ್ದರು. ಬಿದ್ದಾಪುರ ಬಳಿ ರಸ್ತೆಯಲ್ಲಿ ಎದುರಿಗೆ ಪೊಲೀಸರು ಬರುತ್ತಿರುವುದನ್ನು ಕಂಡು ಆತನನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಆತನಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಮುಂಬಯಿಗೆ ಕೂಲಿಗೆ ಹೋಗಿದ್ದ ಪಾಲಕರು ವಿಷಯ ತಿಳಿದು ಬಂದು ದೂರು ನೀಡಿದ್ದು, ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net