ಅಭಿವೃದ್ಧಿ ಕಾರ್ಯಗಳೇ ಪ್ರಜ್ವಲ್ಗೆ ಶ್ರೀರಕ್ಷೆ

crp- 1
Published on
  • ಚನ್ನರಾಯಪಟ್ಟಣ : ಅಭಿವೃದ್ಧಿ ಕಾರ್ಯಗಳೇ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಗೆಲುವಿಗೆ
    ಶ್ರೀರಕ್ಷೆಯಾಗಲಿವೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.ಸ್ವಗ್ರಾಮ ಎ.ಚೋಳೆನಹಳ್ಳಿಯಲ್ಲಿ ಮತ ಚಲಾಯಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈವರೆಗೆ ವಿರೋಧಿಗಳು ನಡೆಸಿದ ಹಲವು ಷಡ್ಯಂತ್ರ, ತೇಜೋವಧೆಗಳಿಗೆ ಜಿಲ್ಲೆಯ ಮತದಾರರು ತೀರ್ಮಾನ ಪ್ರಕಟಿಸಿದ್ದಾರೆ. ಇದು ಪ್ರಜ್ವಲ್ ರೇವಣ್ಣ ಅವರ ಗೆಲುವಿಗೆ ನೆರವಾಗಲಿದೆ ಎಂದರು.ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದ ಎನ್‌ಡಿಎಗೆ ತಾಲೂಕಿನಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ನಮ್ಮ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ದಿ ಕೆಲಸಗಳೇ ಪಕ್ಷಕ್ಕೆ ಮತ್ತು ಅಭ್ಯರ್ಥಿ ಪ್ರಜ್ವಲ್‌ಗೆ ವರದಾನವಾಗಿವೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net