ಸಿಆರ್​ಪಿಎಫ್​ ಪೇದೆ ಪತ್ನಿಯ ಸಾವಿನ ಸುತ್ತ ಅನುಮಾನದ ಹುತ್ತ: ಮದ್ವೆ ಆಗಿ 6 ತಿಂಗಳಾಗಿತ್ತಷ್ಟೇ...

Murder or Suicide
Published on

ತುಮಕೂರು: ಸಿಆರ್​ಪಿಎಫ್​ ಪೇದೆಯ ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿ ಸಾವಿಗೀಡಾಗಿದ್ದು, ವರದಕ್ಷಿಣೆಗಾಗಿ ಪೇದೆಯಿಂದಲೇ ಹತ್ಯೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಗೌರಮ್ಮ(20) ಮೃತ ದುರ್ದೈವಿ. ತುಮಕೂರು ತಾಲೂಕಿನ ಲಕ್ಕೇನಹಳ್ಳಿಯಲ್ಲಿ ಘಟನೆ ನಡೆದಿದ್ದು, ಹತ್ಯೆ ಮಾಡಿ ನೇಣು ಹಾಕಿ ಆತ್ಮಹತ್ಯೆ ಎಂದು ಪೇದೆ ರವೀಶ್​ ಕುಟುಂಬ ಬಿಂಬಿಸಿದೆ ಎಂದು ಆರೋಪಿಸಲಾಗಿದೆ.

ರವೀಶ್ ಸಿಆರ್​ಪಿಎಫ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮದುವೆಯಾಗಿ ಆರು ತಿಂಗಳು ಮಾತ್ರ ಆಗಿತ್ತು. ಇದರ ನಡುವೆ ರವೀಶ್​ ಮತ್ತು ಕುಟುಂಬ ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡುತ್ತಿದ್ದರು ಹಾಗೂ ಇದೇ ವಿಚಾರಕ್ಕೆ ಹಲವು ಬಾರಿ ಜಗಳವು ನಡೆದಿದೆ ಎನ್ನಲಾಗಿದೆ.

ವರದಕ್ಷಿಣೆ ತರದೇ ಇದ್ದುದ್ದಕ್ಕೆ ಹತ್ಯೆ ಮಾಡಿ ಇದೀಗ ಆತ್ಮಹತ್ಯೆ ಕತೆ ಕಟ್ಟಿದ್ದಾರೆ ಎಂದು ದೂರಿದ್ದು, ಸರ್ಕಾರಿ ಜಿಲ್ಲಾಸ್ಪತ್ರೆಗೆ ಮೃತಳನ್ನು ದಾಖಲಿಸಿ ಕುಟುಂಬವು ಪರಾರಿಯಾಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಕುಟುಂಬದ ವಿರುದ್ಧ ತುಮಕೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net