ಶೃಂಗೇರಿಯಲ್ಲಿ ಪ್ರವಾಸಿಗರ ದಂಡು

28sri-2
ಶೃಂಗೇರಿ ಶಾರದಾಂಬೆ ದೇವಸ್ಥಾನದ ಆವರಣದಲ್ಲಿ ಕಂಡು ಬಂದ ಭಕ್ತರ ದಂಡು.
Published on

ಶೃಂಗೇರಿ: ಬೇಸಿಗೆ ರಜೆಯ ಜತೆಗೆ ಸರ್ಕಾರಿ ಹಾಗೂ ಬ್ಯಾಂಕ್ ನೌಕರರಿಗೆ ವಾರಾಂತ್ಯದಲ್ಲಿ ರಜೆಯಿದ್ದ ಕಾರಣ ಶ್ರೀಕ್ಷೇತ್ರದಲ್ಲಿ ಶನಿವಾರ ಹಾಗೂ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಅದರಲ್ಲೂ ಭಾನುವಾರ ಶಾರದಾಂಬೆ ದರ್ಶನಕ್ಕೆ ಆಗಮಿಸಿದ್ದ ಭಕ್ತರ ಸಂಖ್ಯೆ ತುಸು ಜಾಸ್ತಿಯೇ ಇತ್ತು.

ಮಂಗಳೂರು, ಬೆಂಗಳೂರು, ಉಡುಪಿ, ಮೈಸೂರು, ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ಶಾರದಾಂಬೆ, ತೋರಣ ಗಣಪತಿ, ವಿದ್ಯಾಶಂಕರ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ಮಠದ ವಸತಿಗೃಹ ಹಾಗೂ ಖಾಸಗಿ ವಸತಿ ಗೃಹಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಗಾಂಧಿ ಮೈದಾನದ ವಾಹನ ನಿಲುಗಡೆ ಸ್ಥಳ ಬಹುತೇಕ ಭರ್ತಿಗೊಂಡಿತ್ತು. ಅಂಗಡಿ-ಮುಗ್ಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು.
ನರಸಿಂಹ ವನದಲ್ಲಿ ಗುರುನಿವಾಸದಲ್ಲಿ ಜಗದ್ಗುರು ಶ್ರೀ ಭಾರತೀತೀರ್ಥ ಅವರನ್ನು ದರ್ಶನ ಪಡೆದರು. ಬಿರುಬಿಸಿಲನ್ನು ಲೆಕ್ಕಿಸದೇ ಪ್ರವಾಸಿಗರು ಕಿಗ್ಗಾದ ಶ್ರೀ ಋಷ್ಯ ಶೃಂಗೇಶ್ವರ ಸ್ವಾಮಿ, ಶ್ರೀ ದುರ್ಗಾ ಪರಮೇಶ್ವರಿ, ಈಶ್ವರಗಿರಿಯ ಶ್ರೀ ಮಲಹಾನಿಕರೇಶ್ವರ ಹಾಗೂ ಶ್ರೀ ಕಾಳಿಕಾಂಬ ದೇವಾಲಗಳಿಗೂ ಭೇಟಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net