ಶ್ರೀಮಹದೇಶ್ವರ ದೇಗಲದಲ್ಲಿ ಭಕ್ತರ ದಂಡು

25-KGL-4,,,,,
ಆಷಾಢ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಪಟ್ಟಣದ ಮರಡಿಗುಡ್ಡದ ಶ್ರೀ ಮಹದೇಶ್ವರ ಸ್ವಾಮಿಯ ದರ್ಶನ ವನ್ನು ಭಕ್ತರು ಪಡೆದು ಪೂಜೆ ಸಲ್ಲಿಸಿದರು .
Published on

ಕೊಳ್ಳೇಗಾಲ: ಆಷಾಢದ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಪಟ್ಟಣದ ಮರಡಿಗುಡ್ಡ ಶ್ರೀಮಹದೇಶ್ವರ ದೇವಸ್ಥಾನಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ತೆರಳಿ ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸಿದರು.

ಪಟ್ಟಣದ ಪ್ರಸಿದ್ಧ ಮರಡಿಗುಡ್ಡದ ಮೇಲಿರುವ ಶ್ರೀ ಮಹದೇಶ್ವರ ದೇವಸ್ಥಾನದಲ್ಲಿ ದೇವರಿಗೆ ರುದ್ರಾಭಿಷೇಕ, ಮಹಾಮಂಗಳಾರತಿ ನೆರವೇರಿತು.

ಕೊಳ್ಳೇಗಾಲ ತಾಲೂಕಿನ ವಿವಿಧ ಗ್ರಾಮಗಳು ಹಾಗೂ ಪಟ್ಟಣದ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಹೂ, ಕಾಯಿ, ಧೂಪ ಸಮರ್ಪಿಸಿ ಭಕ್ತಿ ಮೆರೆದರು. ಸರತಿ ಸಾಲಿನಲ್ಲಿ ಆಮಿಸಿದ ಭಕ್ತರಿಗೆ ಮಂಗಳರಾತಿ ನೀಡಿ ತೀರ್ಥ ಪ್ರಸಾದ ನೀಡಲಾಯಿತು. ಅರ್ಚಕ ಶ್ರೀನಿವಾಸ್ ಶಾಸ್ತ್ರಿ ಪೂಜಾ ಕೈಂಕರ್ಯ ನಡೆಸಿದರು.

ದೇವಸ್ಥಾನದ ಹೊರಭಾಗದಲ್ಲಿ ಶ್ರೀ ಮಹದೇಶ್ವರ ಅನ್ನದಾಸೋಹ ಸೇವಾ ಟ್ರಸ್ಟ್ ಮೂಲಕ ದೇವಾಲಯಕ್ಕೆ ಆಗಮಿಸಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net