ಇಕ್ಕಟ್ಟಿನ ತಾಲೂಕು ಕಚೇರಿಯಲ್ಲಿ ಜಿಲ್ಲಾಧಿಕಾರಿ ಅಹವಾಲು ಸ್ವೀಕಾರ !

kadaba
Published on

ಕಡಬ: ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಕಡಬ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಒಂದೆಡೆ ಮಳೆ, ಇನ್ನೊಂದೆಡೆ ಕಚೇರಿಯ ಎದುರು ಪುರುಷರು, ಮಹಿಳೆಯರು ಅರ್ಜಿ ಹಿಡಿದುಕೊಂಡು ನಿಂತಿದ್ದರು. ಜಿಲ್ಲಾಧಿಕಾರಿ ತಹಸೀಲ್ದಾರ್ ಅವರ ಕಚೇರಿಯ ಒಳಗಡೆ ಜನರ ಸಮಸ್ಯೆ ಆಲಿಸಿ ಪರಿಹರಿಸುತ್ತಿದ್ದರು. ಇಂತಹ ಉತ್ತಮ ಕಾರ್ಯಕ್ರಮ ಆದರೂ ಇದನ್ನು ಒಂದು ಸಭಾಭವನ ಅಥವಾ ವಿಶಾಲ ಕೊಠಡಿಯಲ್ಲಿ ಮಾಡಿದ್ದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತಿತ್ತು. ಇನ್ನಾದರೂ ತಾಲೂಕು ಆಡಳಿತ ಎಚ್ಚೆತ್ತೊಳ್ಳಲಿ ಎಂದು ಸಾರ್ವಜನಿಕರ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net