ಅಡ್ಡಪಲ್ಲಕ್ಕಿ ಉತ್ಸವ ಅದ್ದೂರಿ

12ALD 02
ಬೆಟಗೇರಿ ಗ್ರಾಮದಲ್ಲಿ ಹನುಮ ಜಯಂತಿ ಅಂಗವಾಗಿ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಪ್ರಮುಖರಾದ ಅರವಿಂದ, ಬಸವರಾಜ, ಮುತ್ತಯ್ಯ, ನವೀನ, ಕುಮಾರ ಇತರರಿದ್ದರು.
Published on

ಅಳವಂಡಿ: ಸಮೀಪದ ಬೆಟಗೇರಿ ಗ್ರಾಮದಲ್ಲಿ ಹನುಮ ಜಯಂತಿ ಪ್ರಯುಕ್ತ ಸ್ವಾಮಿ ವಿವೇಕಾನಂದ ಗೆಳೆಯರ ಬಳಗ ಹಾಗೂ ಗ್ರಾಮಸ್ಥರಿಂದ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ, ಮೆರವಣಿಗೆ, ಮಹಾ ದಾಸೋಹ ಕಾರ್ಯಕ್ರಮ ಜರುಗಿತು.

ಇದನ್ನೂ ಓದಿ: ಹನುಮ ಜಯಂತಿ ಆಚರಣೆ

ದೇವಸ್ಥಾನವನ್ನು ತಳಿರು-ತೋರಣ, ಹೂಗಳಿಂದ ಸಿಂಗರಿಸಲಾಗಿತ್ತು. ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದರು. ಅಡ್ಡಪಲ್ಲಕ್ಕಿಯಲ್ಲಿ ಶ್ರೀ ಮಾರುತೇಶ್ವರ ಉತ್ಸವ ಮೂರ್ತಿ ಇರಿಸಿ ಕಳಸ, ಸಕಲ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಈ ವೇಳೆ ಭಕ್ತರು ಪೂಜೆ ಸಲ್ಲಿಸಿ ನಮಿಸಿದರು. ಅಡ್ಡಪಲ್ಲಕ್ಕಿ ದೇವಸ್ಥಾನ ತಲುಪಿದ ನಂತರ ದಾಸೋಹ ಸೇವೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net