

ಸಿರವಾರ: ಸಣ್ಣ ನೀರಾವರಿ ಇಲಾಖೆಯಿಂದ ಒಂದು ಕೋಟಿ ರೂ. ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗುತ್ತಿದೆ ಎಂದು ಶಾಸಕ ರಾಜಾವೆಂಕಟಪ್ಪ ನಾಯಕ ಹೇಳಿದರು. ತಾಲೂಕಿನ ಮಾಡಿಗಿರಿ ಗ್ರಾಮದಲ್ಲಿ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಚೆಕ್ ಡ್ಯಾಂ ನಿರ್ಮಾಣದಿಂದ 125 ಎಕರೆ ಜಮೀನಿಗೆ ನೀರಿನ ಸೌಲಭ್ಯ ದೊರೆಯಲಿದೆ. ರೈತರು ಇದರ ಲಾಭ ಪಡೆದು ಆರ್ಥಿಕವಾಗಿ ಸಬಲಾರಗಬೇಕು ಎಂದು ತಿಳಿಸಿದರು.
ಮುಖಂಡರಾದ ರಾಜಾ ರಾಮಚಂದ್ರ ನಾಯಕ, ಜಿ.ಲೋಕರೆಡ್ಡಿ, ಚಂದ್ರಪ್ಪ ಬ್ಯಾಗವಾಟ, ಶ್ರೀಧರಸ್ವಾಮಿ, ನಾಗರಾಜ ಗೌಡ, ಡಿ.ಎನ್.ವೈ,ಗೋಪಾಲ ನಾಯಕ ಹರವಿ, ಪಿ.ರವಿಕುಮಾರ, ದಾನಪ್ಪ, ವೇಮನಗೌಡ ಮಾಡಿಗಿರಿ, ಗುರುರಾಜ ಕುಲಕರ್ಣಿ ಇದ್ದರು.