ಕರಿಯಂಗಳದಲ್ಲಿ ಕೋಟಿ ವೃಕ್ಷ ಅಭಿಯಾನ

kariyangala
ಸ್ವಾತಂತ್ರೃ ದಿನಾಚರಣೆ ಪ್ರಯುಕ್ತ ಕರಿಯಂಗಳ ಗ್ರಾಪಂನಲ್ಲಿ ಕೋಟಿ ವೃಕ್ಷ ಅಭಿಯಾನ ನಡೆಯಿತು. ಗ್ರಾಪಂ ಅಧ್ಯಕ್ಷೆ ರಾಧಾ ಲೋಕೇಶ್, ಉಪಾಧ್ಯಕ್ಷ ರಾಜು ಜಿ.ಕೋಟ್ಯಾನ್, ನಿಕಟಪೂರ್ವ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಮಾಜಿ ಉಪಾಧ್ಯಕ್ಷೆ ವೀಣಾ ಆಚಾರ್ಯ ಮತ್ತಿತರರು ಹಾಜರಿದ್ದರು.
Published on

ಮಂಗಳೂರು: ಸ್ವಾತಂತ್ರೃ ದಿನಾಚರಣೆ ಪ್ರಯುಕ್ತ ಕರಿಯಂಗಳ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ರಾಧಾ ಲೋಕೇಶ್ ಧ್ವಜಾರೋಹಣ ನೆರವೇರಿಸಿದರು. ಪಂಚಾಯಿತಿ ವ್ಯಾಪ್ತಿಯ ಅಮೃತಕರ ಕಲ್ಕುಟ ಕೊಳದ ಬಳಿ ಉಪಾಧ್ಯಕ್ಷ ರಾಜು ಜಿ.ಕೋಟ್ಯಾನ್ ಧ್ವಜಾರೋಹಣ ಮಾಡಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಪಂಚ ಅಭಿಯಾನದಡಿ ಕೋಟಿ ವೃಕ್ಷ ಅಭಿಯಾನ, ಆಜಾದಿ ಕಾ ಅಮೃತ ಮಹೋತ್ಸವ ಅಭಿಯಾನದಡಿ ವಸುಧಾ ವಂದನಾ ಕಾರ್ಯಕ್ರಮ ನೆರವೇರಿಸಲಾಯಿತು. ಪಂಚ ಪ್ರತಿಜ್ಞೆ ಕೈಗೊಂಡ ಬಳಿಕ ಕೊಳದ ಬಳಿ ಸಸಿ ನೆಡಲಾಯಿತು. ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಮಾಜಿ ಉಪಾಧ್ಯಕ್ಷೆ ವೀಣಾ ಆಚಾರ್ಯ, ಸದಸ್ಯರು, ಪಿಡಿಒ ಮಾಲಿನಿ, ಸಿಬ್ಬಂದಿ ವರ್ಗ, ಶ್ರೀ ವಿದ್ಯಾವಿಲಾಸ ಪ್ರಾಥಮಿಕ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net