

ಕುಮಟಾ: ಕೆನರಾ ಸೌಹಾರ್ದ ಸಹಕಾರಿಯು ಕಳೆದ ವರ್ಷದಂತೆ ಈ ವರ್ಷವೂ ಸುಮಾರು ಒಂದು ಕೋಟಿ ರೂ. ಲಾಭ ಗಳಿಸಿದ್ದು, ಸಹಕಾರಿಯ ಅಭಿವೃದ್ಧಿ ಕಾರ್ಯಗಳ ಜತೆಗೆ ಸಿಬ್ಬಂದಿ ವೇತನವನ್ನು ಶೇ. 34 ರಷ್ಟು ಏರಿಸಲಾಗಿದೆ ಸಹಕಾರಿಯ ಅಧ್ಯಕ್ಷ ಅರವಿಂದ ಕೃಷ್ಣರಾವ್ ಪೈ ಹೇಳಿದರು.
ಪಟ್ಟಣದ ರಥಬೀದಿಯಲ್ಲಿರುವ ವೆಂಕಟರಮಣ ದೇವಸ್ಥಾನದ ದ್ವಾರಕಾನಾಥ ಸಭಾಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಹಕಾರಿಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸದಸ್ಯರು ನೀಡಿದ ಸಲಹೆ-ಸೂಚನೆಗಳಿಗೆ ಅರವಿಂದ ಪೈ ಪ್ರತಿಕ್ರಿಯಿಸಿದರು. ಸಹಕಾರಿಯ ನಿಯಮಗಳಡಿ ಬರುವ ಸೂಚನೆಗಳನ್ನು ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳುವುದಾಗಿ ಸಭೆಗೆ ತಿಳಿಸಿ, ಸದಸ್ಯರ ಸಹಕಾರ ಕೋರಿದರು.
ಸಭೆಯನ್ನು ಹಿರಿಯರಾದ ಪುರುಷೋತ್ತಮ ಮುಕುಂದ ಶಾನಭಾಗ ಹೆಗಡೆಕರ, ವಸುದೇವ ಯಶವಂತ ಪ್ರಭು, ಮುರಳಿಧರ ಸಾಂತಪ್ಪ ಪ್ರಭು, ದಿನಕರ ಕಾಮತ ಉದ್ಘಾಟಿಸಿದರು.
ಲೆಕ್ಕಪರಿಶೋಧಕ ಸುರೇಶ ಗಂಗಾಧರ ಗೋಳಿ, ಹಿರಿಯ ಸದಸ್ಯರಾದ ಮಾಧವ ಶಂಕರ ಕೋಟಿ, ಶಿರೀಶ ಪಾಂಡುರಂಗ ನಾಯಕ, ವಸಂತ ಭಂಡಾರ್ಕರ್, ಶೇಷಗಿರಿ ಕೃಷ್ಣ ಶಾನಭಾಗ, ಸುರೇಂದ್ರ ಆಚಾರ್ಯ, ರಾಯೇಶ್ವರ ಪೈ, ಪ್ರಭಾಕರ ಗೋಳಿ, ರಾಮನಾಥ ಶ್ರೀಧರ ಶಾನಭಾಗ, ಮಾಧವ ಕೆ ಶಾನಭಾಗ, ಸಂಜೀವ ಸುರೇಶ ಕಾಮತ, ವಾಸುದೇವ ದಾಮೋದರ ಶಾನಭಾಗ, ನಿರ್ದೇಶಕರಾದ ಅನಂತ ಚಂದ್ರಕಾಂತ ಕಾಮತ, ಅಕ್ಷತಾ ಮೂಡ್ಲಗಿರಿ ನಾಯಕ, ಮುರಳೀಧರ ಯಶವಂತ ಪ್ರಭು, ಸುಮಂತ ಸುರೇಂದ್ರ ಆಚಾರ್ಯ, ಸ್ವಾತಿ ರಾಯೇಶ್ವರ ಪೈ, ಕೃಷ್ಣ ಗುನಗ, ಜನಾರ್ಧನ ಗೌಡ, ಪ್ರಭಾರ ಪ್ರಧಾನ ವ್ಯವಸ್ಥಾಪಕ ಸುನೀಲ ಪ್ರಕಾಶ ಬಾಳಗಿ ಹಾಗೂ ಸಿಬ್ಬಂದಿ ಇದ್ದರು.
ಉಪಾಧ್ಯಕ್ಷ ಶ್ರೀರಾಮ ಸಾಂತಪ್ಪ ಪೈ ಸ್ವಾಗತಿಸಿದರು. ಹೊನ್ನಾವರ ಶಾಖಾ ವ್ಯವಸ್ಥಾಪಕಿ ಸವಿತಾ ಪುತ್ತು ಶಾನಭಾಗ ನಿರೂಪಿಸಿದರು. ನಿರ್ದೇಶಕಿ ಸ್ವಾತಿ ರಾಯೇಶ್ವರ ಪೈ ವಂದಿಸಿದರು.