

ಮುರಗೋಡ: ಸಮೀಪದ ಹಾರುಗೊಪ್ಪ ಗ್ರಾಮದಲ್ಲಿ ಶನಿವಾರ ಸಂಜೆ ಗುಡುಗು ಸಿಡಿಲು ಸಹಿತ ಮಳೆಯಾಗಿದ್ದರಿಂದ ಅಪಾರ ಬೆಳೆ ನಾಶವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶನಿವಾರ ನಿರಂತರವಾಗಿ ಸುರಿದ ಮಳೆಗೆ ರೆತರ ಹೊಲ&ಗದ್ದೆಗಳ ಒಡ್ಡು ಒಡೆದು ಕಬ್ಬು ಸೇರಿ ವಿವಿಧ ತರಕಾರಿ ಬೆಳೆಗಳು ನೀರಲ್ಲಿ ಕೊಚ್ಚಿ ಹೋಗಿವೆ. ಸೋಯಾಬೀನ್, ಹೆಸರುಕಾಳು, ಉದ್ದ, ಹತ್ತಿ ಹಾಳಾಗಿದೆ. ಇದರೊಟ್ಟಿಗೆ ಬೀಜ, ಗೊಬ್ಬರ ತೇಲಿ ಹೋಗಿವೆ. ಅಪಾರ ಮಳೆಯಿಂದ ರಸ್ತೆಗಳು ಜಲಾವೃತಗೊಂಡು ಜನರು ಪರದಾಡಿದರು. ಹಾರುಗೂಪ್ಪ&ಗೂಂತಮಾರ ಸಂಪರ್ಕ ಕಲ್ಪಿಸುವ ರಸ್ತೆ ಕೊರೆತ ಉಂಟಾಗಿ ಹಾಳಗಿದೆ.
ಕೆರೆ ಒಡೆಯುವ ಭೀತಿ ಮುರಗೋಡ ಸುತ್ತಲಿನ ತಡಸಲೂರ, ಹಿರೇಬೂದನೂರ, ಕುಟರನಟ್ಟಿ, ಹಲಕಿಯಲ್ಲಾದ ಮಳೆಯಿಂದ ಹಾರುಗೊಪ್ಪ ಗ್ರಾಮದಲ್ಲಿ ಇರುವ ಕೆರೆ ಅಪಾರ ನೀರು ಹರಿದು ಬಂದಿರುವ ಕಾರಣಕ್ಕೆ ಕರೆಗೆ ಇದೀಗ ಒಡೆಯುವ ಭೀತಿ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಸಂಬಂಧಿಸಿದ ಅಧಿಕಾರಿಗಳು ಕೈಗೊಳ್ಳಬೇಕು ಎಂದು ಗ್ರಾಮದ ಜನರು ಆಗ್ರಹಿಸಿದ್ದಾರೆ.