ಕಾಡಾನೆ ಹಾವಳಿಗೆ ಬೆಳೆ ನಾಶ

28mdk05
ಆನೆ ಹಾವಳಿಯಿಂದ ಸಿದ್ದಲಿಂಗಪುರ ವ್ಯಾಪ್ತಿಯಲ್ಲಿ ಹಾನಿಗೆ ಒಳಗಾಗಿರುವ ಶುಂಠಿ ಬೆಳೆ
Published on

ಕುಶಾಲನಗರ: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಲಿಂಗಪುರ ಗ್ರಾಮದ ವ್ಯಾಪ್ತಿಯಲ್ಲಿ ಒಂದು ತಿಂಗಳಿಂದಲೂ ಕಾಡಾನೆಗಳ ಹಾವಳಿಯಿಂದಾಗಿ ಸಿದ್ದಲಿಂಗಪುರ, ಅರಸಿಗುಪ್ಪೆ, ಅಳಲುಗುಪ್ಪೆ ವ್ಯಾಪ್ತಿಯ ರೈತರ ಜಮೀನಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.

ಸಿದ್ದಲಿಂಗಪುರ ಗ್ರಾಮದ ರಾಬಿನ್ ರಾಘವೇಂದ್ರ, ರಾಮು, ಮುತ್ತುಸ್ವಾಮಿ, ಪೂವಯ್ಯ, ಮಹೇಶ್, ಗೀತಮ್ಮ, ಕಾಂತರಾಜ್ ಸುಂದರ ಸೇರಿದಂತೆ ಹಲವಾರು ರೈತರ ಜಮೀನಿಗೆ ದಾಳಿ ಮಾಡಿ ಶುಂಠಿ, ಜೋಳ, ಸಿಹಿ ಗೆಣಸು, ಮರ ಗೆಣಸು, ಬಾಳೆ ಬೆಳೆಗಳನ್ನು ತುಳಿದ ತಿಂದು ಅಪಾರ ಪ್ರಮಾಣದಲ್ಲಿ ನಷ್ಟ ಪಡಿಸಿವೆ. ಬಾಣವಾರ ಉಪ ಅರಣ್ಯ ಇಲಾಖೆ ಅಧಿಕಾರಿಗಳು ಸ್ಧಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net