ಕಾಡು ಹಂದಿಗಳ ದಾಳಿಗೆ ಬೆಳೆ ನಾಶ

20 HANUR 6
ಪಳನಿಮೇಡು ಗ್ರಾಮದ ಪೆರುಮಾಳ್ ಅವರ ಜಮೀನಿಗೆ ಕಾಡು ಹಂದಿಗಳು ಲಗ್ಗೆ ಇಟ್ಟು ಮುಸುಕಿನ ಜೋಳದ ಫಲಸನ್ನು ನಾಶಪಡಿಸಿರುವುದು.
Published on

ಹನೂರು: ತಾಲೂಕಿನ ರಾಮಾಪುರ ಸಮೀಪದ ಪಳನಿಮೇಡು ಗ್ರಾಮದ ಜಮೀನೊಂದಕ್ಕೆ ಶುಕ್ರವಾರ ರಾತ್ರಿ ಕಾಡು ಹಂದಿಗಳ ಹಿಂಡು ನುಗ್ಗಿ ಮುಸುಕಿನ ಜೋಳದ ಬೆಳೆ ನಾಶ ಪಡಿಸಿದೆ.

ಗ್ರಾಮದ ಪೆರುಮಾಳ್ ಅವರು ಜಮೀನಿನಲ್ಲಿ ಮುಸುಕಿನ ಜೋಳ ಬೆಳೆದಿದ್ದು, ತೆನೆಗಳು ಬಂದಿದ್ದವು. ಈ ಭಾಗದಲ್ಲಿ ಕಾಡು ಹಂದಿಗಳ ಹಾವಳಿ ಹೆಚ್ಚಿರುವ ಹಿನ್ನೆಲೆಯಲ್ಲಿ ರಾತ್ರಿ ಪೆರುಮಾಳ್ ಅವರು ಬೆಳೆ ರಕ್ಷಣೆ ಸಲುವಾಗಿ ಕಾವಲಿಗಾಗಿ ಜಮೀನಿಗೆ ತೆರಳಿದ್ದರು. ಆದರೆ ತಡರಾತ್ರಿ ಸಮೀಪದ ಅರಣ್ಯ ಪ್ರದೇಶದಿಂದ ಆಗಮಿಸಿದ ಕಾಡು ಹಂದಿಗಳ ಹಿಂಡು ಜಮೀನಿಗೆ ಲಗ್ಗೆ ಇಟ್ಟು ಒಂದು ಎಕರೆಯಲ್ಲಿ ಬೆಳೆದಿದ್ದ ಫಸಲನ್ನು ತಿಂದು ಹಾಗೂ ತುಳಿದು ನಾಶಪಡಿಸಿದೆ. ಇದರಿಂದ ನಷ್ಟ ಉಂಟಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡುವಂತೆ ಒತ್ತಾಯಿಸಿದ್ದಾರೆ.

ಜತೆಗೆ ಕಾಡು ಹಂದಿಗಳ ದಾಳಿಯಿಂದ ಮುಸುಕಿನ ಜೋಳದ ಫಸಲು ನಾಶವಾಗಿರುವುದರ ಬಗ್ಗೆ ಪೆರುಮಾಳ್ ಪುತ್ರಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net