ಆನೆದಾಳಿಗೆ ಫಶಲು ನಾಶ

ane
Published on

ಕೈಲಾಂಚ: ಹೋಬಳಿಯ ನಾಗಲಾಪುರ ಚಿಕ್ಕಸ್ವಾಮಿ ಅವರ ತೋಟಕ್ಕೆ ಶುಕ್ರವಾರ ರಾತ್ರಿ ಒಂಟಿ ಆನೆ ದಾಳಿ ಲಗ್ಗೆಇಟ್ಟು, ಪಪ್ಪಾಯ, ಹಲಸು ಹಾಗೂ ತೆಂಗಿನಮರಗಳನ್ನು ನಾಶಪಡಿಸಿದೆ.

ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿರುವ ಈ ಒಂಟಿ ಆನೆ ನಿತ್ಯ ಈ ಭಾಗದ ಜಮೀನುಗಳಲ್ಲಿ ದಾಳಿ ನಡೆಸಿ, ಮತ್ತೆ ಅರಣ್ಯ ಸೇರುತ್ತಿದೆ. ಆನೆಯನ್ನು ಮೂಲಸ್ಥಾನಕ್ಕೆ ಅಟ್ಟಲು ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಬೇಕು ಎಂದು ರೈತ ಚಿಕ್ಕಸ್ವಾಮಿ ಅವಲತ್ತುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net