

ರಾಚಯ್ಯ ಸ್ವಾಮಿ ಮಾಚನೂರು
ರಾಯಚೂರು ಆಕಾಶದಲ್ಲಿ ಕರಿಮೋಡಗಳು ದಿಬ್ಬಣ ನಡೆಸುತ್ತಿರುವಾಗಲೇ ಜಿಲ್ಲೆಯ ರೈತರು ಔತಣ ನೀಡುತ್ತಾರೆ. ಆದರೆ ಸರ್ರನೇ ಬೀಸುವ ಬಿರುಗಾಳಿಗೆ ಕರಿಮೋಡಗಳೇ ಮಾಯವಾಗಿ ಬಿಳಿಯ ಆಕಾಶ ಮತ್ತೆ ದರ್ಶನವಾಗುತ್ತಿರುವ ಪರಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.
ರಾಜ್ಯಾದ್ಯಂತ ನಾನಾ ಕಡೆ ಮುಂಗಾರು ಮಳೆ ಬಿರುಸು ಪಡೆದಿರುವಾಗ ಬಿಸಿಲನಾಡು ರಾಯಚೂರು ಜಿಲ್ಲೆಯಲ್ಲಿನ ಸದ್ಯದ ಭಿನ್ನಸ್ಥಿತಿ ಇದು. ಮುಂಗಾರು ಪೂರ್ವದಿಂದಲೇ ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲೂ ವರುಣನ ದರ್ಶನವಾಗಿದೆ. ಆದರೆ ಜಿಲ್ಲೆಯ ಏಳು ತಾಲೂಕಿನ ಕೇವಲ ಪಟ್ಟಣ ಪ್ರದೇಶದಲ್ಲಿ ಮಾತ್ರ ಮಳೆಯಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ವರ್ಷಧಾರೆಯ ಸುಳಿವೇ ಇಲ್ಲದಂತಾಗಿದೆ.
ಜಿಲ್ಲೆಯಲ್ಲಿ ಎಷ್ಟು ಬಿತ್ತನೆ ಪ್ರಮಾಣ
ಜಿಲ್ಲೆಯಲ್ಲಿ ಈ ಬಾರಿ ಕೃಷಿ ಇಲಾಖೆಯಿಂದ ಒಟ್ಟು 5.53 ಲಕ್ಷ ಹೇಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಇಟ್ಟುಕೊಂಡಿದ್ದು, ಈ ಪೈಕಿ ಒಂದು ತಿಂಗಳಲ್ಲಿ 1.76 ಲಕ್ಷ ಹೇಕ್ಟರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ರೈತರು ಬಿತ್ತನ ಮಾಡಿದ್ದಾರೆ. ರಾಯಚೂರು ತಾಲೂಕಿನಲ್ಲಿ 34,133 ಹೇಕ್ಟರ್,ಮಾನ್ವಿ 22,440 ಹೇಕ್ಟರ್,ಸಿರವಾರ 20,978 ಹೇಕ್ಟರ್, ದೇವದುರ್ಗ 34,053 ಹೇಕ್ಟರ್,ಲಿಂಗಸೂಗೂರು 33,396 ಹೇಕ್ಟರ್ , ಮಸ್ಕಿ 23,545 ಹೇಕ್ಟರ್ ಮತ್ತು ಸಿಂಧನೂರಿನಲ್ಲಿ 7,490 ಹೇಕ್ಟರ್ ಪ್ರದೇಶದಲ್ಲಿ ರೈತರು ಹೆಸರು,ಉದ್ದು, ಹತ್ತಿ, ಭತ್ತ,ತೋಗರಿ ಬಿತ್ತನೆ ಪೂರ್ಣ ಪ್ರಮಾಣ ಮಾಡಲು ರೈತರು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮಳೆರಾಯನ ಎದುರು ನೋಡುತೋದ್ದಾರೆ.
ಆಷಾಢ ಮಾಸ ಶುರುವಾಗುವ ಮುನ್ನವೇ ಗಾಳಿಯ ಪ್ರವರ ಹೆಚ್ಚಳವಾಗಿದೆ. ಇದು ಬಿತ್ತನೆ ಹಿನ್ನಡೆಗೆ ಕಾರಣವಾಗಿದೆ ಎಂದು ರೈತರು ಅಭಿಪ್ರಾಯ ಪಡುತ್ತಿದ್ದಾರೆ.
ಮೇಲಿಂದ ಮೇಲೆ ಮಳೆ ಬರುತ್ತಿದ್ದರೆ ಭೂಮಿಯ ಮೇಲ್ಪದರು ಒಣಗುವುದಿಲ್ಲ, ಆದರೆ, ಆಷಾಢದ ಗಾಳಿ ಇಡೀ ಭೂಮಿಯಲ್ಲಿನ ತೀವಾರತ ಆಡಿಸಿಕೊಂಡು ಯೋಗುತ್ತಿದೆ. ಇಂತಹ ವೇಳೆ ಹತ್ತನೆ ಮಾಡಿದರೆ ಬೆಳೆ ಸೂಕ್ತವಾಗಿ ಬರುವವಿಲ್ಲ ಎಂದು ರೈತರು ಅಭಿಪ್ರಾಯ ಪಡುತ್ತಾರೆ.
ಈ ಬಾರಿ ಮುಂಗಾರು ಪೂರ್ವದಲ್ಲಿ ಉತ್ತಮವಾಗಿ ಮಳೆಯಾಗಿದ್ದರಿಂದ ಜೂ.7 ರಂದು ಮೀರಗ್ ಹೂಡುತ್ತಲೆ ಬಿತ್ತನೆ ಆರಂಭವಾಗಿತ್ತು. ಇದರಿಂದ ಹತ್ತಿ, ತೊಗರಿ ಬೆಳೆ ಮೊಳಕೆ ಒಡೆದು ಹಸಿ ನೆಲ ಬಿಟ್ಟು ಮೇಲೇಳುವ ಹಂತದಲ್ಲಿವೆ. ಈ ವೇಳೆ ಮಳೆಯಾದರೆ ಬೆಳೆ ಹುಲುಸಾಗಿ ಬರಲಿದೆ ಆದರೆ, ಹಲವು ದಿನಗಳಿಂದ ಹೆಚ್ಚು ಕಡಿಮೆ ಮಳೆಯಿಂದ ಬೆಳೆಗಳು ಒಣಗುವ ಹಂತಕ್ಕೆ ಹೋಗುತ್ತಿವೆಂದು ರೈತರು ರೋಧನೆ ವ್ಯಕ್ತಿಪಡಿಸುತ್ತಾರೆ. ಶೀಘ್ರ ಮಳೆ ಬರಲಿ ಎಂದು ಹಲವು ಗ್ರಾಮಗಳಲ್ಲಿ ದೇವರ ದೊರೆ ಹೋಗುವುದು ನಡೆಯುತ್ತಿದೆ.
ದರ್ಶನಕ್ಕಷ್ಟೆ ಕರಿ ಮೋಡಗಳು
ಜೂನ್ ಅಂತ್ಯದಲ್ಲಿ 3-4 ಬಾರಿ ಮಳೆಗಳಾಗಬೇಕಿತ್ತು. ಆದರೆ, ಇದುವರೆಗೆ ಜಿಲ್ಲೆಯಲ್ಲಿ ಅತಿ ಕಡಿಮೆ ಪ್ರಮಾಣದ ಮಳೆ ದಾಖಲಾಗಿದೆ. ಕಳೆದ ವರ್ಷ ಮುಂಗಾರು ಪೂರ್ವದಲ್ಲಿ ವಾಡಿಕೆಗಿಂತಲೂ ಹೆಚ್ಚಿನ ಮಳೆಯಾಗಿತ್ತು. ಆದರೆ, ಈ ಬಾರಿ ಜೂನ್ ತಿಂಗಳಲ್ಲಿ ಕನಿಷ್ಠ 88.8 ಮೀ.ಮಿ ಮಳೆಯಾಗಬೇಕಿತ್ತು. ಆದರೆ 72.7 ಮೀ.ಮಿ. ಮಾತ್ರ ಮಳೆಯಾಗಿದೆ. ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ಮಳೆ ಸುರಿಯುವ ಮುನ್ನವೇ ಕರಿಮೋಡಗಳು ಕರಗುತ್ತಿವೆ. ಇಂತಹ ಹವಾಮಾನ ಜಿಲ್ಲೆಯ ರೈತರನ್ನು ಮತ್ತೆ ದುಗುಡಕ್ಕೆ ಸಿಲುಕಿಸಿದೆ.
ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗಿರುವುದರಿಂದ ರೈತರು ಖುಷಿಯಲ್ಲಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಆದರೆ ಜೂನ್ ತಿಂಗಳಿನಲ್ಲಿ ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ರೈತರು ಕಂಗಾಲಗಿದ್ದಾರೆ. ಭಯ ಪಡುವ ಅವಶ್ಯಕತೆ ಇಲ್ಲ. ಹವಮಾನ ಇಲಾಖೆ ವರದಿ ಪ್ರಕಾರ ಮಳೆಯಾಗುವ ಸಾಧ್ಯತೆ ಇದೆ. ರೈತರಿಗೆ ಬಿತ್ತನ ಬೀಜ ಹಾಗೂ ರಸಗೊಬ್ಬರದ ಕೊರತೆಯಾಗದಂತೆ ಕೃಷಿ ಇಲಾಖೆ ನೋಡಿಕೊಳ್ಳಲಿದೆ.
ಪ್ರಕಾಶ ಚೌಹಾಣ್ ಜಂಟಿ ನಿರ್ದೇಶಕ ಕೃಷಿ ಇಲಾಖೆ ರಾಯಚೂರು