

ರಾಯಚೂರು ಬಿಸಿಲುನಾಡು ಎಂದೇ ಪ್ರಸಿದ್ಧವಾಗಿರುವ ರಾಯಚೂರು ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಿಂದ ಜಲಾಶಯಗಳು ಭರ್ತಿಯಾದರು ಕೆಳ ಭಾಗದ ರೈತರಿಗೆ ಮಾತ್ರ ಸಮಪರ್ಕ ನೀರು ದೊರೆಯದೆ ರೈತರು ನೀರಿಗಾಗಿ ಅಕ್ಷರಂಶ ಜನರು ಕಂಗಾಲಾಗಿದ್ದರೆ.
ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಜಿ¯್ಲÉಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ಹಾಗೂ ನಾರಾಯಣಪುರ ಬಲದಂಡೆ ಕಾಲುವೆ ನಿರ್ಮಿಸಲಾಗಿದೆ. ಆದರೆ, ಕಾಲುವೆ ಕೊನೆಯ ಅಂಚಿನ ರೈತರ ಗೋಳಾಟ ಇಂದಿಗೂ ತಪ್ಪಿಲ್ಲ. ಕೊನೆಯ ಭಾಗದವರೆಗೂ ನೀರು ಬಾರದೆ ರೈತರು ನಷ್ಟಕ್ಕೆ ಅನುಭವಿಸುತ್ತಿz್ದÁರೆ. ಅಕ್ರಮ ಕಾಲುವೆ ಮೇಲ್ಭಾಗದ ರೈತರನ್ನು ಶ್ರೀಮಂತಗೊಳಿಸಿದರೆ, ಕಾಲುವೆ ಅಂಚಿನ ಪ್ರದೇಶ ರೈತರನ್ನು ಬಡತನಕ್ಕೆ ತಳ್ಳಿದೆ. ಜಿಲ್ಲೆಯಲ್ಲಿ ಇತ್ತಿಚ್ಚಿಗೆ ಸುರಿದ ಅಕಾಲಿಕ ಮಳೆ ಒಂದು ಸಮಸ್ಯೆಯಾದರೆ ನೀರಾವರಿಯಲ್ಲಿ ಕಾಲುವೆಯಿಂದ ನೀರು ಸಿಗುತ್ತಿಲ್ಲ. ಪಂಪ್‌ಸೆಟï ನೀರಿಗೆ ವಿದ್ಯುತ ಕಡಿತದ ಬಿಸಿಯಿಂದ ರೈತರಿಗೆ ಬೆಳೆ ಉಳಿಸಿಕೊಳ್ಳುವುದೇ ಪ್ರಸಕ್ತ ಬೇಸಿಗೆಯಲ್ಲಿ ಸವಾಲಾಗಿ ಮಾರ್ಪಟ್ಟಿದೆ.
ಒಳಗುತ್ತಿವೆ ಬೆಳೆಗಳು
ಜಿಲ್ಲೆಯಲ್ಲಿ ಎರಡು ನದಿಗಳು ಹರಿಯುತ್ತಿದ್ದರೂ ನೀರಾವರಿ ಸೌಲಭ್ಯದಿಂದ ವಂಚಿತರಾಗುತ್ತಿz್ದÁರೆ. ಭತ್ತ, ಶೇಂಗಾ,ಈರುಳ್ಳಿ ಸೇರಿದಂತೆ ತೋಟಗಾರಿಕೆ ಬೆಳೆಗಳು ನೀರಿಲ್ಲದೆ ಒಣಗುತ್ತಿರುವುದರಿಂದ ರೈತರು ಟ್ಯಾಂಕರ್ ನೀರು ಖರೀದಿಸಿ ಬೆಳೆ ಉಳಿಸಿಕೊಳ್ಳವಂತಹ ಸ್ಥಿತಿ ನಿರ್ಮಾಣವಾಗಿದೆ. ಅನೇಕ ಏತ ನೀರಾವರಿ ಯೋಜನೆಗಳೂ ನನೆಗುದಿಗೆ ಬಿದ್ದಿರುವ ಕಾರಣ ರೈತರ ಸಂಕಷ್ಟ ಹೇಳತೀರದಾಗಿದೆ. ತುಂಗಭದ್ರಾ ಎಡದಂಡೆ ನಾಲೆಯ ಕೊನೆಯ ಭಾಗದ ೯೨ ನೇ ವಿತರಣಾ ಉಪ ಕಾಲುವೆಗಳಿಗೆ ಸಮರ್ಪಕ ನೀರು ಹರಿಯದ ಕಾರಣ ಬೆಳೆದ ಭತ್ತ ಒಣಗುತ್ತಿದೆ.
ಅಣೆಕಟ್ಟಿನಲ್ಲಿ ಸಮರ್ಪಕ ನೀರು ಸಂಗ್ರಹ ಇರಲಿ ಇಲ್ಲದಿರಲಿ ಮೇಲ್ಭಾಗದ ಅಕ್ರಮ ನೀರಾವರಿಯಿಂದಾಗಿ ಕೊನೆಯ ಭಾಗಕ್ಕೆ ಪ್ರತಿ ಬಾರಿಯೂ ಪ್ರತಿಭಟನೆ ಮಾಡಿಯೇ ನೀರು ಪಡೆಯುವ ಸ್ಥಿತಿ ಇದೆ. ಜಿಲ್ಲೆಯಲ್ಲಿ ಈ ವರ್ಷ ಮಳೆ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಆಗಿದ್ದರು, ೧೦೪ ಮತ್ತು ೧೦೫ ನೇ ವಿತರಣಾ ಕಾಲುವೆಗಳ ವ್ಯಾಪ್ತಿಗೊಳಪಡುವ ರೈತರ ಜಮೀನು ಈ ಬಾರಿ ನೀರು ಕಾಣದಂತಾಗಿದೆ.
೧೫ ಸಾವಿರ ಎಕರೆಗೆ ನೀರಿಲ್ಲ
ರಾಯಚೂರು ತಾಲೂಕಿನ ಸುಮಾರು ೧೫ ಸಾವಿರ ಎಕರೆ ಪ್ರದೇಶದಲ್ಲಿ ಸುಮಾರು ವರ್ಷದಿಂದ ಕಾಲುವೆಯಲ್ಲಿ ನೀರು ಬರದೆ ಇರುವುದರಿಂದ ಪ್ರತಿ ವರ್ಷ ರೈತರು ಪ್ರತಿಭಟನೆ ಮಾಡುತ್ತಿದ್ದರು ಯಾವುದೇ ಉಪಯೋಗವಾಗಿಲ್ಲ. ಅಽಕಾರಿಗಳು, ಜನಪ್ರತಿನಿಽಗಳ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿz್ದÁರೆ ಆದರೆ ಕೆಳ ಭಾಗದ ವಿತರಣಾ ಕಾಲುವೆಗಳಿಗೆ ಮಾತ್ರ ನೀರು ಒದಗಿಸಲು ಸಾದ್ಯವಾಗುತ್ತಿಲ್ಲವೆಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಎಷ್ಟು ಬೇಸಿಗೆಯಲ್ಲಿ ಎಷ್ಟು ಬಿತ್ತನೆ
ಮುಂಗಾರಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಈ ಬಾರಿ ಬೇಸಿಗೆಯಲ್ಲಿ ರೈತರು ಕೃಷಿ ಇಲಾಖೆಯ ಗುರಿ ಮೀರಿ ಬಿತ್ತನೆ ಮಾಡಲಾಗಿದೆ. ಇಲಾಖೆಯಿಂದ ೧೦,೪೩೦೦ ಹೆಕ್ಟರ್ ಗುರಿ ಪೈಕಿ ೧,೦೫,೦೦೫ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಇದರಲ್ಲಿ ೧೦೧೬೪೫ ಹೆಕ್ಟರ್ ಪ್ರದೇಶದಲ್ಲಿ ಏಕಧಾನ್ಯ, ೨೫ ಹೆಕ್ಟರ್ ಪ್ರದೇಶದಲ್ಲಿ ದ್ವಿದಳ ಧಾನ್ಯ ಹಾಗೂ ೩೩೩೫ ಹೆಕ್ಟರ್ ಪ್ರದೇಶದಲ್ಲಿ ಎಣ್ಣೆಕಾಳು ಬೆಳೆಯಲಾಗಿದೆ.
ಆದರೆ ಕಾಲುವೆಯಲ್ಲಿನ ನೀರಿಲ್ಲ ಎನ್ನುವುದು ಒಂದು ಸಮಸ್ಯೆಯಾದರೆ ಪಂಪ್‌ಸೇಟ್‌ಗಳಿಗೆ ಜೆಸ್ಕಾಂ ಇಲಾಖೆಯಿಂದ ೧೨ ಗಂಟೆ ವಿದ್ಯುತ್ ನೀಡುವ ಆದೇಶವಿದ್ದರು ಕೇವಲ ೩ ರಿಂದ ೪ ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದೆ. ಇದರಿಂದ ರೈತರು ಬೆಳೆಗಳನ್ನು ಉಳಿಸಿಕಳ್ಳಲು ಪರದಾಟ ಪಡುತ್ತಿದ್ದಾರೆ.
ಈ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರು ಸೇರಿದಂತೆ ಬೆಳೆಗಳಿಗೆ ಯಾವುದೇ ಸಮಸ್ಯೆಯಾಗದಂತೆ ನೀರು ಒದಗಿಸಲು ನೀರಾವರಿ ಇಲಾಖೆಯ ಅಽಕಾರಿಗಳಿಗೆ ಸೂಚನೆ ನೀಡಲಾಗಿದೆ. ಜತೆಗೆ ಗ್ರಾಮೀಣ ಭಾಗದ ರೈತರ ಪಂಪ್‌ಸೆಟ್‌ಗಳಿಗೆ ಸರಿಯಾದ ಸಮಯಕ್ಕೆ ವಿದ್ಯುತ್ ಒದಗಿಸದಿದ್ದರೆ ಮುಂದಿದ ಕ್ರಮ ಜರುಗಿಸಲಾಗುವುದು.
ಡಾ.ಶರಣ ಪ್ರಕಾಶ ಪಾಟೀಲ್ ಜಿಲ್ಲಾ ಉಸ್ತುವಾರಿ ಸಚಿವ ರಾಯಚೂರು
ಗ್ರಾಮೀಣ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಗಾಳಿ ಬಿಸಿದರೆ ಸಾಕು ೫ ರಿಂದ ೬ ಗಂಟೆ ಕರೆಂಟ್ ತೆಗೆಯುತ್ತಾರೆ.ಮೊದಲೇ ಕಾಲುವೆಯಿಂದ ಕೆಳ ಭಾಗದಕ್ಕೆ ನೀರು ಬರುತ್ತಿಲ್ಲ. ಕರೆಂಟ್ ತಗಿದರೆ ಕಷ್ಟವಾಗುತ್ತಿದೆ ಇದರಿಂದ ಬೆಳೆಗಳು ಒಣಗುವ ಪರಸ್ಥಿತಿ ಎದುರಾಗಿದೆ.
ಲಕ್ಷ÷್ಮಣ ಗೌಡ ಕಡಗಂದೊಡ್ಡಿ ರೈತ ರಾಯಚೂರು