ಕಾಡಾನೆಗಳ ದಾಳಿಗೆ ಫಸಲು ನಾಶ

6spt4
ಸೋಮವಾರಪೇಟೆ ತಾಲ್ಲೂಕಿನ ಈಚಲುಪುರ ಗಾಮದ ತೋಟವೊಂದರಲ್ಲಿ ಅಡಕೆ ಗಿಡಗಳನ್ನು ಕೆಡವಿರುವುದು.
Published on

ಸೋಮವಾರಪೇಟೆ: ತಾಲೂಕಿನ ಕೊಡ್ಲಿಪೇಟೆ ಸಮೀಪದ ಈಚಲಪುರ ಮತ್ತು ಕ್ಯಾತೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ಕಾಡಾನೆಗಳ ಹಿಂಡು ಕೃಷಿ ಭೂಮಿ ಮೇಲೆ ದಾಳಿ ಮಾಡಿ ಫಸಲು ಹಾನಿ ಮಾಡಿವೆ.

ಗ್ರಾಮದ ನಿವಾಸಿ ಕೃಷ್ಣಕುಮಾರ್ ಎಂಬುವವರ ಅಡಕೆ ತೋಟಕ್ಕೆ ಲಗ್ಗೆ ಇಟ್ಟು ಹಾನಿ ಮಾಡಿವೆ. ಪೈಪ್‌ಗಳು, ನೀರಿನ ಡ್ರಮ್, ಸೋಲಾರ್ ತಂತಿಬೇಲಿಯನ್ನು ಹಾಳು ಮಾಡಿದ್ದು, ಬಾಳೆಗಿಡಗಳನ್ನು ಮುರಿದು ತಿಂದಿವೆ.

ಕ್ಯಾತೆ ಗ್ರಾಮದ ನಿಂಗಯ್ಯ, ಕೇಶವ, ಅಣ್ಣಯ್ಯ, ರಂಗಯ್ಯ ಎಂಬುವವರ ಭತ್ತದ ಗದ್ದೆಗೆ ನುಗ್ಗಿ, ಪೈರನ್ನು ತಿಂದು ತುಳಿದು ಹಾನಿಗೊಳಿಸಿವೆ. ಯಸಳೂರು ಸಮೀಪದ ಬಾಳೆಕೆರೆ ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅಲ್ಲಿದ್ದ ಕಾಡಾನೆಗಳು ಬೆದರಿ ನಮ್ಮೂರಿನತ್ತ ಬಂದು ಹಾವಳಿ ಎಬ್ಬಿಸಿದ್ದು, ಫಸಲು ನಷ್ಟಪಡಿಸುತ್ತಿವೆ. ಕೂಡಲೇ ಅರಣ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೃಷಿಕ ಕೃಷ್ಣಕುಮಾರ್ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net