

ಗೋಣಿಕೊಪ್ಪ: ಸೋಮವಾರ ಮಧ್ಯಾಹ್ನ ಗದ್ದೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ಮೌಲ್ಯ ಬೆಳೆ ಹಾಗೂ ಯಂತ್ರೋಪಕರಣ ಬೆಂಕಿಗಾಹುತಿಯಾಗಿದೆ.
ಅರ‌್ವತೋಕ್ಲು ಗ್ರಾಮದ ಕಾಡ್ಯಮಾಡ ದೇವಯ್ಯ ಎಂಬುವರಿಗೆ ಸೇರಿದ ಗದ್ದೆಯಲ್ಲಿ ಭತ್ತದ ಕೆಲಸ ಮಾಡುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿತು. ಪರಿಣಾಮ ಸುಮಾರು 160 ಕ್ವಿಂಟಾಲ್ ಭತ್ತ, 10 ಸಾವಿರಕ್ಕೂ ಅಧಿಕ ಹುಲ್ಲಿನ ಕಂತೆ, 2 ಲಕ್ಷ ಮೌಲ್ಯದ ಕ್ರಷರ್ ಯಂತ್ರ ಕೂಡ ಬೆಂದು ಹೋಗಿದೆ.
ಮಧ್ಯಾಹ್ನ ಕಾಣಿಸಿಕೊಂಡ ಬೆಂಕಿ ನಂದಿಸಲು ಗೋಣಿಕೊಪ್ಪ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟರು. ಪಕ್ಕದ ತೋಟಕ್ಕೂ ಆವರಿಸುವ ಆತಂಕ ಸೃಷ್ಟಿಸಿತು. ಕೊನೆಗೂ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಸ್ಥಳಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ನೀಡುವ ಭರವಸೆ ನೀಡಿದರು.
ಅಗ್ನಿಶಾಮಕ ದಳದ ಅಧಿಕಾರಿ ಬಿ. ಟಿ. ಪಳಂಗಪ್ಪ, ಎ. ಕೆ. ಕಾಳಪ್ಪ, ಕಿರಣ್‌ಕುಮಾರ್, ನಿಂಗರಾಜಪಾಟೀಲ್, ಡಿ. ಶಿವಲಿಂಗ ಕಾರ್ಯಾಚರಣೆ ನಡೆಸಿದರು.