ಬೆಳೆ ಸಮೀಕ್ಷೆ ತೀವೃಗತಿಯಲ್ಲಿ ಮುಗಿಸಿಸುವಂತೆ ತಹಸೀಲ್ದಾರ್ ಸೂಚನೆ

250920 Hanumasagara Farmers PR's Meeting
ಹನುಮಸಾಗರದ ನಾಡಕಚೇರಿಯಲ್ಲಿ ಗುರುವಾರ ನಡೆದ ಬೆಳೆ ಸಮೀಕ್ಷೆಯ ಪಿ.ಆರ್.ಗಳ ಸಭೆಯಲ್ಲಿ ತಹಸೀಲ್ದಾರ್ ಎಂ.ಸಿದ್ದೇಶ ಮಾತನಾಡಿದರು.
Published on

ಹನುಮಸಾಗರ: ರೈತರನ್ನು ಭೇಟಿಯಾಗಿ ಅವಧಿಗಿಂತ ಮುಂಚಿತವಾಗಿ ಬೆಳೆ ಸಮೀಕ್ಷೆ ಮುಗಿಸಬೇಕು ಎಂದು ತಹಸೀಲ್ದಾರ್ ಎಂ.ಸಿದ್ದೇಶ ಹೇಳಿದರು.

ಪಟ್ಟಣದ ನಾಡಕಚೇರಿಯಲ್ಲಿ ಗುರುವಾರ ಹೋಬಳಿ ವ್ಯಾಪ್ತಿಯ ಬೆಳೆ ಸಮೀಕ್ಷೆಯ ಪಿ.ಆರ್.ಗಳ ಸಭೆಯಲ್ಲಿ ಮಾತನಾಡಿದರು. ಸ್ಮಾರ್ಟ್‌ಫೋನ್ ಹೊಂದದೆ ಇರುವಂತಹ ರೈತರನ್ನು ಸಂರ್ಪಕಿಸಿ ಬೆಳೆ ಸಮೀಕ್ಷೆ ಕೈಗೊಳ್ಳಬೇಕು. ಈಗಾಗಲೇ ಗ್ರಾಮಕ್ಕೆ ಒಬ್ಬರಂತೆ ಪಿಆರ್‌ಗಳನ್ನು ನೇಮಕ ಮಾಡಲಾಗಿದ್ದು, ಅಲಕ್ಷ್ಯತನ ವಹಿಸಬಾರದು. ಕಡ್ಡಾಯವಾಗಿ ಸೆ.30 ರೊಳಗೆ ಬೆಳೆ ಸಮೀಕ್ಷೆ ಪೂರ್ಣಗೊಳಿಸಬೇಕು. ಇನ್ನೂ ತಾಂತ್ರಿಕ ತೊಂದರೆ ಉಂಟಾದರೆ, ಕೃಷಿ ಇಲಾಖೆ ಅಥವಾ ಕಂದಾಯ ಇಲಾಖೆ ಅಧಿಕಾರಿಗಳನ್ನು ಸಂರ್ಪಕಿಸಬೇಕು ಎಂದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಮಾತನಾಡಿದರು. ಬೆಳೆ ಸಮೀಕ್ಷೆಯ ನೋಡಲ್ ಅಧಿಕಾರಿ ದುರ್ಗಾಪ್ರಸಾದ, ಕೃಷಿ ಅಧಿಕಾರಿಗಳಾದ ಪ್ರಕಾಶ ತಾರಿವಾಳ, ಶ್ರೀದೇವಿ ಶಿರೂರ, ಭಾಗ್ಯಲಕ್ಷ್ಮೀ ಪಾಟೀಲ್, ಉಪತಹಸೀಲ್ದಾರ್ ರೇಣುಕಾ ಹಾದಿಮನಿ, ಕಂದಾಯ ನಿರೀಕ್ಷಕ ಉಮೇಶಗೌಡ ಪಾಟೀಲ್, ಗ್ರಾಮಲೆಕ್ಕಾಧಿಕಾರಿಗಳಾದ ವೇಲಪ್ಪನ್, ರವಿ ಮಧನ, ಸಹಾಯಕರಾದ ಸಂಗಮ್ಮ ಹಕ್ಕಿ, ಬಸಪ್ಪ ದೇವಲಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net