

ಹೂವಿನಹಡಗಲಿ: ಬೆಳೆ ಸಮೀಕ್ಷೆದಾರರ ಗೌರವಧನ ಹೆಚ್ಚಿಸುವುದು ಹಾಗೂ ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘದಿಂದ ತಹಸೀಲ್ದಾರ್ ಸಂತೋಷ್‌ಕುಮಾರ್‌ಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ಬೆಳೆಗೆ ಕೀಟ ಕಾಟ ರೈತರಿಗೆ ಪರದಾಟ
ಸಂಘದ ತಾಲೂಕು ಅಧ್ಯಕ್ಷ ಗಡ್ಡಿ ಸಂತೋಷ ಕುಮಾರ ಮಾತನಾಡಿ, ಕಂದಾಯ ಮತ್ತು ಕೃಷಿ ಇಲಾಖೆಯಿಂದ ಜಂಟಿ ಬೆಳೆ ಸಮೀಕ್ಷೆ ನಡೆಸುವ ಸಮೀಕ್ಷೆದಾರರು, ಬೆಳೆ ಸಮೀಕ್ಷೆದಾರರಿಗೆ ಜೀವವಿಮೆ ಮಾಡಿಸಬೇಕು. ಪ್ರತಿ ಪ್ಲಾಟ್‌ಗೆ ನೀಡುತ್ತಿರುವ 11 ರೂ. ಪ್ರೋತ್ಸಾಹಧನವನ್ನು ಕನಿಷ್ಠ 50 ರೂ.ಗೆ ಹೆಚ್ಚಿಸಬೇಕು. ಶೂ, ಟಿ ಶರ್ಟ್, ರೇನ್‌ಕೋಟ್ ಸೇರಿ ಸುರಕ್ಷಾ ಪರಿಕರಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಸಂಘದ ಸದಸ್ಯ ಬಸವರಾಜ ಸಂಶಿ ಮಾತನಾಡಿ, ಬೆಳೆ ಸಮೀಕ್ಷೆದಾರರಿಗೆ ಸಮೀಕ್ಷೆ ವೇಳೆ ಅನಾಹುತ ಸಂಭವಿಸಿದರೆ ಸ್ಥಳದಲ್ಲಿಯೇ ವೈದ್ಯಕೀಯ ಚಿಕಿತ್ಸೆ ಹಾಗೂ ಹೆಚ್ಚಿನ ಚಿಕಿತ್ಸೆ ವೆಚ್ಚವನ್ನು ಇಲಾಖೆ ಭರಿಸಬೇಕು ಎಂದು ಆಗ್ರಹಿಸಿದರು. ಪದಾಧಿಕಾರಿಗಳಾದ ಎಚ್.ದೇವೇಂದ್ರ, ಆರ್.ಕೊಟ್ರಬಸಪ್ಪ, ಎ.ನಾಗರಾಜ, ಸಿದ್ದೇಶ, ದುರುಗಪ್ಪ, ಸುರೇಶ್, ರಫಿ, ಪಿ.ಮಂಜುನಾಥ, ಎಂ.ಜೀವರಾಜ, ಮಲ್ಲಿನಾಥ, ಓಲಿ ಮಂಜುನಾಥ, ಎಮ್ಮಿ ಹನುಮಜ್ಜ ಇತರರು ಇದ್ದರು.