ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಿ

11KKNR-01
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಕುಕನೂರು ಪಟ್ಟಣದ ವೀರಭದ್ರಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಚ್.ಪ್ರಾಣೇಶಗೆ ಮನವಿ ಸಲ್ಲಿಸಿದರು. ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರುಳಿ, ತಾಲೂಕು ಕಾರ್ಯದರ್ಶಿ ಈಶಪ್ಪ ಸಬರದ್, ನಗರ ಘಟಕದ ಅಧ್ಯಕ್ಷ ಶಿವು ಬಂಗಿ, ಪ್ರಮುಖರಾದ ಹನುಮಪ್ಪ ಮರಡಿ ಇದ್ದರು.
Published on

ಕುಕನೂರು: ರೈತರ ಬೆಳೆದ ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ರಾಜ್ಯ ಸರ್ಕಾರ ಘೋಷಣೆ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಟ್ಟಣದ ವೀರಭದ್ರಪ್ಪ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಎಚ್.ಪ್ರಾಣೇಶಗೆ ಮನವಿ ಸಲ್ಲಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರುಳಿ ಮಾತನಾಡಿ, ಪಟ್ಟಣದಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಗೊಳ್ಳುತ್ತಿದೆ. ಆದರೆ, ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಪಪಂ ಆಡಳಿತ ಮಂಡಳಿ ಗಮನಕ್ಕೆ ತಂದರು, ಇದರ ಬಗ್ಗೆ ಗಮನವಿಲ್ಲ. ಇನ್ನೂ ಈ ಕಾಮಗಾರಿ ಬಗ್ಗೆ ಶಾಸಕರು ಗಮನಹರಿಸಬೇಕು.

ಎಪಿಎಂಸಿಯಲ್ಲಿ ಅನೇಕ ವರ್ಷಗಳಿಂದ ಟೆಂಡರ್ ಪ್ರಕ್ರಿಯೆ ನಡೆಯುತ್ತಿಲ್ಲ. ಹೆಸರು, ಮೆಕ್ಕೆಜೋಳ ಸೇರಿ ಇತರೆ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿ. ನೋಂದಣಿ ಪ್ರಕ್ರಿಯೆ ಬೆಳೆ ಬರುವ ಮುನ್ನವೇ ಮಾಡಬೇಕು. ಎಪಿಎಂಸಿಯಲ್ಲಿ ರೈತಭವನ ನಿರ್ಮಿಸಿ ಎಂದರು.

ರೈತ ಸಂಘದ ತಾಲೂಕು ಕಾರ್ಯದರ್ಶಿ ಈಶಪ್ಪ ಸಬರದ್, ನಗರ ಘಟಕದ ಅಧ್ಯಕ್ಷ ಶಿವು ಬಂಗಿ, ಪ್ರಮುಖರಾದ ಹನುಮಪ್ಪ ಮರಡಿ, ಬಸವರಾಜ ಸಬರದ, ಈರಪ್ಪ ಲಾಳ್‌ಗೊಂಡರ, ಉಮೇಶ ಬೆದವಟ್ಟಿ, ಶಿವಪ್ಪ ಸಂದಿಮನಿ, ಸೈಯದ್‌ಸಾಬ ಮುಲ್ಲಾ, ಬಸವರಾಜ ಈಬೇರಿ, ಗಂಗಮ್ಮ ಹುಡೇದ, ಮಲ್ಲಪ್ಪ ಚಳಮರದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net