ಬೆಳೆ ರಕ್ಷಣೆ-ರೈತರಿಗೆ ಸಲಹೆ

Bele hani
Published on

ಹಿರೇಕೆರೂರ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗುವ ಪ್ರತಿಕೂಲ ಪರಿಣಾಮ ತಡೆಯಲು ರೈತರಿಗೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಹಿತೇಂದ್ರ ಗೌಡಪ್ಪಳವರ ಕೆಲ ಸಲಹೆಗಳನ್ನು ನೀಡಿದ್ದಾರೆ.

ಬೆಳೆಗಳಲ್ಲಿ ನಿಂತ ನೀರನ್ನು ಬಸಿಗಾಲುವೆ ಮಾಡಿ ಹೊರ ಹಾಕಬೇಕು. ಗೋವಿನ ಜೋಳ ಮತ್ತು ಹತ್ತಿ ಬೆಳೆಗಳಲ್ಲಿ 13:0:45 ಪ್ರತಿ ಲೀಟರ್ ನೀರಿಗೆ 3 ರಿಂದ 5 ಗ್ರಾಂ. ಹಾಗೂ 19:19:19 ಪ್ರತಿ ಲೀಟರ್ ನೀರಿಗೆ 3 ರಿಂದ 5 ಗ್ರಾಂ. ಬೆರೆಸಿ ಸಿಂಪಡಿಸಬೇಕು. ನಂತರ ಇಮಾಮಕ್ಕಿನ್ ಬೆಂಜೋಯಟ್ ಪ್ರತಿ ಲೀಟರ್ ನೀರಿಗೆ 0.5 ಗ್ರಾಂ.ಬೆರೆಸಿದ ದ್ರಾವಣವನ್ನು ಸಿಂಪಡಿಸಬೇಕು.

ಹತ್ತಿ, ಸೋಯಾ, ಅವರೆ ಹಾಗೂ ಶೇಂಗಾ ಬೆಳೆಗಳ ಬುಡಕ್ಕೆ ಕಾರ್ಬೆಂಡೇಜಿಮ್ ಪ್ರತಿ ಲೀಟರ್ ನೀರಿಗೆ 3 ಗ್ರಾಂ, ಅಥವಾ ಥೈಯೋಫಿನೇಟ್ ಮಿಥೈಲ್ ಪ್ರತಿ ಲೀಟರ್ ನೀರಿಗೆ 2 ಗ್ರಾಂ.ನಂತೆ ದ್ರಾವಣವನ್ನು ಸುರಿಯಬೇಕು. ಸೋಯಾ ಅವರೆ ಹಾಗೂ ಶೇಂಗಾ ಬೆಳೆಗಳಿಗೆ 0:52:34 ಪ್ರತಿ ಲೀಟರ್ ನೀರಿಗೆ 5 ಗ್ರಾಂ, 19:19:19 ಪ್ರತಿ ಲೀಟರ್ ನೀರಿಗೆ 3 ಗ್ರಾಂ ಹಾಗೂ ಟಿಲ್ಟ್ ಪ್ರತಿ ಲೀಟರ್ ನೀರಿಗೆ 1 ಮಿ.ಲೀನಂತೆ ಸಿಂಪಡಿಸಬೇಕು.

ಕೀಟ ಬಾಧೆ ಇದ್ದಲ್ಲಿ ಇಮಾಮೆಕ್ಸಿನ್ ಬೆಂಜೋಯಟ್ ಪ್ರತಿ ಲೀಟರ್ ನೀರಿಗೆ 0.5 ಗ್ರಾಂ, ಬೆರೆಸಿದ ದ್ರಾವಣವನ್ನು ಸಿಂಪಡಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net