ತರಬೇತಿಯಿಂದ ಕಡಿಮೆಯಾಗಲಿದೆ ಬೆಳೆ ನಷ್ಟ

24mnd1-
Published on

ಮುಂಡಗೋಡ: ನಿಸರ್ಗದಲ್ಲಿನ ಬದಲಾವಣೆ ಹಾಗೂ ಮಾರುಕಟ್ಟೆಯಲ್ಲಿ ದರ ಏರಿಳಿತ ಸರಿದೂಗಿಸಲು ಅಗಾಗ ನುರಿತ ವಿಜ್ಞಾನಿಗಳಿಂದ ಕಾಲ ಕಾಲಕ್ಕೆ ತರಬೇತಿ ಪಡೆಯುವುದರಿಂದ ಭವಿಷ್ಯದಲ್ಲಿನ ನಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಹಿರಿಯ ತೋಟಗಾರಿಕೆ ಅಧಿಕಾರಿ ಕೃಷ್ಣ ಕೂಳೂರ ಹೇಳಿದರು.

ದೇಶಪಾಂಡೆ ರುಡಸೆಟಿ, ಜೆಎಸ್​ಡಬ್ಲ್ಯು ಫೌಂಡೇಷನ್ ಸಹಯೋಗದಲ್ಲಿ ತಾಲೂಕಿನ ಇಂದೂರ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ರೈತರಿಗಾಗಿ ಹಮ್ಮಿಕೊಂಡಿದ್ದ ಅಡಕೆ, ಬಾಳೆ ಬೆಳೆ ಬೇಸಾಯ ಪದ್ಧತಿಗಳು ಮತ್ತು ರೋಗಗಳ ನಿವಾರಣೆ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಶಿರಸಿ ತೋಟಗಾರಿಕೆ ಸಂಶೋಧನಾ ಕೆಂದ್ರದ ಡಾ. ಅಬ್ದುಲ್ ಕರೀಂ ಉದ್ಘಾಟಿಸಿ, ಬೇಸಾಯ ಪದ್ಧತಿ ಹಾಗೂ ರೋಗಗಳ ತಡೆಗಟ್ಟುವಿಕೆ ಕುರಿತು ಮಾಹಿತಿ ನೀಡಿದರು.

ಶಿರಸಿ ತೋಟಗಾರಿಕೆ ಕಾಲೇಜನ ಸುಧೀಂದ್ರ ಕುಲಕರ್ಣಿ, ಉತ್ತಮ ತೋಟದ ನಿರ್ವಹಣೆ ಹಾಗೂ ಮಣ್ಣಿನ ಗುಣಮಟ್ಟ ವಿಷಯಗಳ ಕುರಿತು ಮಾಹಿತಿ ನೀಡಿದರು.

ಡಾ. ಹರೀಶ, ಡಾ. ರಂಗನಾಥ, ವಿನಾಯಕ ಚವ್ಹಾಣ, ಶಿವಾಜಿ ದೇವಿಕೊಪ್ಪ, ಶಶಿಕುಮಾರ ಪರ್ವಾಪುರ, ಅಶೋಕ ಪಾಲೇಕರ, ಸಹದೇವ ನಾಡಿಗೇರ, ಬಿ.ಕೆ. ಪಾಟೀಲ, ಬಸವರಾಜ ನಡವಿನಮನಿ, ರವಿ ದುಗ್ಗಳ್ಳಿ, ಮಹಾಬಲೇಶ್ವರ ನಾಯ್ಕ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net