

ಸಿಂಧನೂರು: ತಾಲೂಕಿನಲ್ಲಿ ಬಿರುಗಾಳಿ ಮಳೆಗೆ ಹಾನಿಗೀಡಾದ ಭತ್ತ ಗದ್ದೆ, ಜಮೀನುಗಳಿಗೆ ಭಾನುವಾರ ಎಂಎಲ್ಸಿ ಬಸನಗೌಡ ಬಾದರ್ಲಿ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ಬಾದರ್ಲಿ ಹಾಗೂ ಹೆಡಗಿನಾಳ ಹೋಬಳಿಯಲ್ಲಿ ಅಧಿಕ ಮಳೆಯಾಗಿದ್ದು, ಉದ್ಬಾಳ, ಗೋಮರ್ಸಿ, ಮಾಡಸಿರವಾರ, ಕನ್ನಾರಿ, ಬೆಳಗುರ್ಕಿ, ಅಲಬನೂರು, ಹರೇಟನೂರು, ಗಿಣಿವಾರ, ಒಳಬಳ್ಳಾರಿ ಹಾಗೂ ಹೆಡಗಿನಾಳ ಗ್ರಾಮದ ಬೆಳೆ ಹಾನಿ ಪ್ರದೇಶಕ್ಕೆ ಕೃಷಿ ಸಹಾಯಕ ನಿರ್ದೇಶಕ ನಜೀರ್ ಅಹ್ಮದ್‌ರೊಂದಿಗೆ ಭೇಟಿ ನೀಡಿದರು.
ಬೆಳೆ ಹಾನಿ ಬಗ್ಗೆ ರಾಯಚೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಕೂಡಲೇ ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿ ಸರ್ವೇ ನಡೆಸಲು ಆದೇಶಿಸುವುದಾಗಿ ಹೇಳಿದ್ದಾರೆ ಎಂದು ಬಸನಗೌಡ ತಿಳಿಸಿದರು. ಪ್ರಮುಖರಾದ ಹೊನ್ನನಗೌಡ ಬೆಳಗುರ್ಕಿ, ರಾಮಲಿಂಗ ರೆಡ್ಡಿ ಬೆಳಗುರ್ಕಿ, ಲಕ್ಷ್ಮೀಪತಿ, ಶಂಕರರೆಡ್ಡಿ, ಅಯ್ಯನಗೌಡ, ಚಂದ್ರಶೇಖರ್ ಬಾದರ್ಲಿ, ಸಂಗನಗೌಡ ಇದ್ದರು.