ಕಾಡಾನೆಗಳ ದಾಳಿಗೆ ಬೆಳೆ ನಷ್ಟ

19skpp1 kadane
Published on


ಸಕಲೇಶಪುರ : ತಾಲೂಕಿನ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ್ಜನಹಳ್ಳಿ ಗ್ರಾಮದಲ್ಲಿ ಸೋಮವಾರ ಕಾಡಾನೆಗಳ ಹಿಂಡೊಂದು ಅಪಾರ ಪ್ರಮಾಣದ ಭತ್ತ, ಕಾಫಿ ಹಾಗೂ ಸೋಲಾರ್ ನಾಶ ಪಡಿಸಿದೆ. 50 ಎಕರೆಗಿಂತ ಅಧಿಕ ಪ್ರಮಾಣದಲ್ಲಿ ಬೆಳೆಯಲಾಗಿದ್ದ ಭತ್ತ, ಕಾಫಿ ಬೆಳೆ, ಸೋಲಾರ್ ಪಂಪ್ ಹಾಗೂ ದೀಪದ ವ್ಯವಸ್ಥೆಯನ್ನು ಕಾಡಾನೆಗಳು ನಾಶಪಡಿಸಿದೆ.


ಈ ಬಗ್ಗೆ ರೈತರು ಯಸಳೂರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆನೆಗಳ ಪುಂಡಾಟಕ್ಕೆ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net