ಮ್ಯಾಮ್ಕೋಸ್‌ನಿಂದ ಗರಿಷ್ಠ 10 ಲಕ್ಷದವರೆಗೆ ಬೆಳೆ ಸಾಲ

19 nrp 2
Published on

ಎನ್.ಆರ್.ಪುರ: ಮ್ಯಾಮ್ಕೋಸ್ ಸಂಸ್ಥೆಯಲ್ಲಿ ಪ್ರಸ್ತುತ 33 ಸಾವಿರ ಷೇರುದಾರರಿದ್ದು, ಹೊಸದಾಗಿ ಮ್ಯಾಮ್ಕೋಸ್ ಆ್ಯಪ್ ಬಿಡುಗಡೆ ಮಾಡಲಾಗಿದೆ ಎಂದು ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್ ತಿಳಿಸಿದರು.
ಬುಧವಾರ ಮ್ಯಾಮ್ಕೋಸ್ ಸದಸ್ಯರ ಸಮಾಲೋಚನ ಸಭೆಯಲ್ಲಿ ಮಾತನಾಡಿದ ಅವರು, ಹೊಸ ಮ್ಯಾಮ್ಕೋಸ್ ಆ್ಯಪ್‌ನಿಂದ ಷೇರುದಾರರು ಅಡಿಕೆ ತಂದು ತೂಕ ಹಾಕಿಸಿದ ಕೂಡಲೇ ಬಿ ಬಿಲ್ ಷೇರುದಾರರ ಮೊಬೈಲ್‌ಗೆ ಬರಲಿದೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ಷೇರುದಾರರಿಗೆ ಕನಿಷ್ಟ 2 ಲಕ್ಷ ರೂ. ವರೆಗೆ ಬೆಳೆಸಾಲ, ಅಡಕೆ ಕೊಳೆ ಔಷಧಿಗಾಗಿ 50 ಸಾವಿರ ರೂ. ಸಾಲ ನೀಡುವ ವ್ಯವಸ್ಥೆ ಇದೆ. ಗರಿಷ್ಠ 10 ಲಕ್ಷದವರೆಗೆ ಬೆಳೆ ಸಾಲ ನೀಡಲಾಗುವುದು. ಬಿ ಬಿಲ್ ನೀಡದ ಕೂಡಲೇ ಹಣ ನೀಡುವ ವ್ಯವಸ್ಥೆ ಮಾಡಲಾಗಿದೆ. ಕರೋನ ಸಮಯದಲ್ಲಿ ಗುಂಪು ವಿಮಾ ಯೋಜನೆ ಜಾರಿಗೆ ತರಲಾಗಿದೆ. ಎರಡು ದಶಕದಲ್ಲಿ 10 ಸ್ವಂತ ಕಟ್ಟಡ, ಸ್ವಂತ ಗೋದಾಮು ನಿರ್ಮಿಸಲಾಗಿದೆ. ಕರೋನ ಸಮಯದಲ್ಲಿ ಅಡಕೆ ಧಾರಣೆ ಕುಸಿಯಂದತೆ ನೋಡಿಕೊಳ್ಳಲಾಗಿದೆ ಎಂದರು.
ರಾಜ್ಯ ಅಡಕೆ ಸಹಕಾರ ಸಂಘಗಳ ಮಹಾ ಮಂಡಳ ಅಧ್ಯಕ್ಷ ಯಡಗೆರೆ ಸುಬ್ರಹ್ಮಣ್ಯ ಮಾತನಾಡಿ, ರಾಜ್ಯ ಅಡಕೆ ಸಹಕಾರ ಮಹಾ ಮಂಡಳ ವ್ಯಾಪ್ತಿಯಲ್ಲಿ 48 ಸಹಕಾರ ಸಂಸ್ಥೆಗಳು ಬರಲಿದೆ. ಅಡಕೆಗೆ ಸಂಕಷ್ಟ ಬಂದಾಗ ಅಡಕೆ ಸಹಕಾರ ಮಹಾ ಮಂಡಳ ರಚನೆ ಮಾಡಿಕೊಂಡು ಹೋರಾಟ ಮಾಡಲಾಗುತ್ತಿದೆ. ಅಡಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ. ಅಡಕೆ ಅರಣ್ಯಉತ್ಪನ್ನ ಎಮಬ ಗೆಜೆಟ್ ನೋಟಿಫಿಕೇಷನನ್ನು ಸಹಕಾರ ಮಹಾ ಮಂಡಳದಿಂದ ಹೋರಾಟ ಮಾಡಿ ಗೆಜೆಟ್ ನೋಟಿಫಿಕೇಷನ್‌ನಿಂದ ತೆಗೆದು ಹಾಕಲಾಗಿದೆ. ಅಡಕೆ ಟಾಸ್ಕ್ ಪೋರ್ಸ್ ರಚನೆಯಾಗಿದ್ದು, ಇದಕ್ಕೆ 200 ಕೋಟಿ ರೂ. ಅನುದಾನ ಬಿಡುಗಡೆ ಗೆ ಸರ್ಕಾರ ಒಪ್ಪಿಕೊಂಡಿದೆ ಎಂದರು.
ಸಹಕಾರ ಭಾರತಿಯ ಜಿಲ್ಲಾಧ್ಯಕ್ಷ ನರೇಂದ್ರ, ತಾಲೂಕು ಅಧ್ಯಕ್ಷ ಕೆ.ಆರ್ ಶಿವಕುಮಾರ್, ಮ್ಯಾಮ್ಕೋಸ್ ನಿರ್ದೇಶಕರಾದ ಬಡಿಯಣ್ಣ, ಸುರೇಶ್ಚಂದ್ರ, ಈಶ್ವರ್, ರತ್ನಾಕರ್, ಷೇರುದಾರರಾದ ಶೃಂಗೇಶ್ವರ, ಎಂ.ಎನ್.ಮರುಳಪ್ಪ, ಪಿ.ಕೆ.ಬಸವರಾಜಪ್ಪ, ಬಿ.ಕೆ.ನಾರಾಯಣ ಸ್ವಾಮಿ, ಶಿವಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net