ಫಸಲ್ ಬಿಮಾ ಯೋಜನೆ ಅಡಿ ಪರಿಹಾರ ನೀಡಿ

chamarasa malipatil
ಚಾಮರಸ ಮಾಲಿಪಾಟೀಲ್
Published on

ಸಿರವಾರ: ರೈತರಿಗೆ ಫಸಲ್ ಬಿಮಾ ಯೋಜನೆ ಅಡಿ ಬೆಳೆನಷ್ಟ ಪರಿಹಾರ ವಿತರಣೆ ಮತ್ತು ಮುಂಗಾರು ಜೋಳ ಖರೀದಿ ಮಾಡಬೇಕು ಎಂದು ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ಬೆಳೆ ಹಾನಿಯಾದರೆ ಪರಿಹಾರ ಸಿಗಲಿದೆಂಬ ಉದ್ದೇಶದಿಂದ ಫಸಲ್ ಬಿಮಾ ಯೋಜನೆ ಅಡಿ ರೈತರು ಹಣ ಪಾವತಿಸಿರುತ್ತಾರೆ. ಆದರೆ, ಅಕಾಲಿಕ ಮಳೆಗೆ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಇನ್ನೂ ಪರಿಹಾರ ನೀಡಿಲ್ಲ.

ಶೀಘ್ರ ವಿತರಣೆಗೆ ಕ್ರಮವಹಿಸಬೇಕು. ಮುಂಗಾರು-ಹಿಂಗಾರು ಜೋಳ ಖರೀದಿಗೆ ಕ್ರಮವಹಿಸಬೇಕು. ಖರೀದಿಸಿದ ಜೋಳದ ಹಣ ಕೂಡಲೇ ಪಾವತಿಸಬೇಕು. ತುಂಗಭದ್ರಾ ಜಲಾಶಯಕ್ಕೆ ಹೊಸದಾಗಿ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿವಿಯಲ್ಲಿ ಜೂ.13ರಂದು ‘ತುಂಗಭದ್ರಾ ಎಡದಂಡೆ ಹಾಗೂ ನಾರಾಯಣಪುರ ಬಲ ಮತ್ತು ಎಡದಂಡೆ ನಾಲೆಯ ಸಮಸ್ಯೆಗಳು ಮತ್ತು ಪರಿಹಾರ’ ಕುರಿತು ವಿಚಾರ ಸಂಕಿರಣ ಏರ್ಪಡಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕು ಎಂದು ಕೋರಿದರು.

ರೈತ ಸಂಘದ ರಾಜ್ಯ ಸಮಿತಿ ಕಾರ್ಯದರ್ಶಿ ಸೂಗೂರಯ್ಯ ಆರ್.ಎಸ್. ಮಠ, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್, ತಾಲೂಕು ಅಧ್ಯಕ್ಷ ಎಚ್.ಶಂಕರಪ್ಪಗೌಡ, ಮುಖಂಡರಾದ ಬಸವರಾಜ ನವಲಕಲ್, ಆದೆಪ್ಪ ಕುರಕುಂದ, ಹಾಜಿ ಮಸ್ತಾನ್, ಮಲ್ಲಣ್ಣ ಗೌಡೂರು, ಸಿದ್ದಯ್ಯ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net