ಬೆಳೆ ವಿಮೆ ಮಾಡಿಸಲು ವ್ಯಾಪಕ ಪ್ರಚಾರ

10 SND 01
ಸಂಡೂರು ತಾಲೂಕು ಚೋರನೂರು ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಖರೀದಿಗೆ ರೈತರು ಸರದಿಯಲ್ಲಿ ನಿಂತಿರುವುದು.
Published on

ಸಂಡೂರು: ಮಳೆಯಿಂದ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿದ್ದು, ಚೋರನೂರು ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ಮೆಕ್ಕೆಜೋಳ, ಜೋಳ, ತೊಗರಿ ಬಿತ್ತನೆ ಬೀಜಗಳ ಮಾರಾಟ ಜೋರಾಗಿದೆ.

ಸಹಾಯಕ ಕೃಷಿ ನಿರ್ದೇಶಕ ರಮೇಶ ಮಾತನಾಡಿ, 34.66 ಟನ್ ಮೆಕ್ಕೆಜೋಳ ಬಿತ್ತನೆ ಬೀಜದಲ್ಲಿ 8 ಟನ್ ಮಾರಾಟವಾಗಿದೆ. 116 ಕ್ವಿಂಟಾಲ್ ಜೋಳದಲ್ಲಿ 2.6 ಕ್ವಿಂಟಾಲ್ ರೈತರು ಖರೀದಿಸಿದ್ದು, 65 ಕ್ವಿಂಟಾಲ್ ತೊಗರಿಯಲ್ಲಿ 9 ಕ್ವಿಂ. ಉಳಿದಿದೆ. ಮಳೆಯಾಶ್ರಿತ, ನೀರಾವರಿ ಬೆಳೆವಿಮೆ ಕುರಿತು ವ್ಯಾಪಕ ಪ್ರಚಾರ ಮಾಡಲಾಗಿದೆ.

ತೊಗರಿ, ನವಣೆ, ನೆಲಗಡಲೆ (ಶೇಂಗಾ), ಸೂರ್ಯಕಾಂತಿ, ಸಜ್ಜೆ, ಜೋಳ, ಹತ್ತಿ, ಮೆಕ್ಕೆಜೋಳಗಳಿಗೆ ಬೆಳೆವಿಮೆ ಮಾಡಿಸಬಹುದು. ಕಳೆದ ಬಾರಿ ಮಳೆ ಅಭಾವದಿಂದ ಬಿತ್ತನೆಗೆ ಹಿನ್ನೆಡೆಯಾಗಿತ್ತು. ಆದರೆ ಈ ಬಾರಿ ಮಳೆ ಉತ್ತಮವಾಗಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ಜೋಳ, ತೊಗರಿ ಬಿತ್ತನೆ ಮುಗಿಯುವ ಹಂತಕ್ಕೆಬಂದಿದೆ. ಮತ್ತೆ ಮಳೆ ಬಂದರೆ ರೈತರು ಮೆಕ್ಕೆಜೋಳ ಬಿತ್ತನೆ ಮಾಡಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net